ದಾಸರಹಳ್ಳಿ: ರಸ್ತೆ ಬದಿಯ ಜಂಕ್ ಫುಡ್ ಗಳಲ್ಲಿ ಪ್ರಪ್ರಥಮ ಸ್ಥಾನದಲ್ಲಿ ನಿಲ್ಲುವ ಅತ್ಯಂತ ರುಚಿಕರ ಮತ್ತು ಅಷ್ಟೇ ಕಲುಷಿತ ಆಹಾರ ಪದಾರ್ಥ ಪಾನಿಪುರಿ. ಈಗಿನ ಕಾಲದಲ್ಲಿ ದೊಡ್ಡವರು, ಚಿಕ್ಕವರು, ಮಹಿಳೆಯರು ಎನ್ನದೆ ಸಂಜೆಯಾಗುತ್ತಲೇ ಬಹುತೇಕ ಮಂದಿ ಮನೆಯ ದಾರಿಯನ್ನು ಹಿಡಿಯುವ ಬದಲು ಪಾನಿಪುರಿ ಮಾರುವವನ ಮುಂದೆ ಪ್ಲೇಟ್ ಹಿಡಿದು ಕ್ಯೂ ನಿಂತಿರುತ್ತಾರೆ.
ಆದರೆ ಕೆಲವೊಮ್ಮೆ ಬೀದಿ ಬದಿಯ ಆಹಾರ ಸೇವಿಸುವ ಮುನ್ನ ಎಚ್ಚರ ಎಚ್ಚರ ಅದರಲ್ಲೂ ರಸ್ತೆಯ ಬದಿಯ ಪಾನಿಪೂರಿ ತಿನ್ನೋ ಮುನ್ನ ಎಚ್ಚರಿಕೆ. ಯಾಕೆಂದರೆ ಕೆಟ್ಟಿರುವ ಆಹಾರ ಪದಾರ್ಥ ಹಾಗೂ ಆಲೂಗೆಡ್ಡೆಯನ್ನು ಪಾನಿಪೂರಿಯಲ್ಲಿ ಹಾಕಿಕೊಡುವ ವೇಳೆ ಸಾರ್ವಜನಿಕರು ಕ್ಲಾಸ್ ತೆಗೆದುಕೊಂಡಿರುವ ಘಟನೆ ನಡೆದಿದೆ.
ಬೆಂಗಳೂರು ಹೊರವಲಯದ ಸೋಲದೇವನಹಳ್ಳಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಹೊರ ರಾಜ್ಯದ ವ್ಯಕ್ತಿಗಳು ಕಡಿಮೆ ದರಕ್ಕೆ ಪಾನಿಪೂರಿಯನ್ನ ಮಾರಾಟ ಮಾಡುತ್ತಿದ್ದು ಈ ಪಾನಿಪೂರಿ ತಿಂದ್ರೆ ನಿಮ್ಮ ದೇಹಕ್ಕೆ ಆಪತ್ತು ತರುತ್ತೆ. ಸಾರ್ವಜನಿಕರ ದೂರಿನ ಹಿನ್ನೆಲೆ ಚಿಕ್ಕಬಾಣಾವಾರ ಪುರಸಭೆ ಅಧಿಕಾರಿಗಳು ದಾಳಿ ಮಾಡಿ, ಪರಿಶೀಲನೆ ನಡೆಸಿ ಪಾನಿಪೂರಿ ಗಾಡಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.