ಯಾದಗಿರಿ: ಪತ್ನಿ, ಅತ್ತೆ ಹಾಗೂ ಮಾವನನ್ನ ಬರ್ಬರವಾಗಿ ಕೊಲೆ ಮಾಡಿದ ಘಟನೆ ಯಾದಗಿರಿ ತಾಲೂಕಿನ ಸೈದಾಪುರ ಬಳಿ ನಡೆದಿದೆ. ಕೊಲೆಯಾದ ಹೆಂಡ್ತಿ ಅನ್ನಪೂರ್ಣ (25) ಅತ್ತೆ ಕವೀತಾ (45) ಹಾಗೂ ಮಾವ ಬಸವರಾಜಪ್ಪ (52) ಮೂವರು ದಾವಣಗೆರೆ ಮೂಲದವರಾಗಿದ್ದಾರೆ.
ಕೊಲೆ ಮಾಡಿದ ಆರೋಪಿ ಯಾದಗಿರಿ ತಾಲೂಕಿನ ಮುನಗಲ್ ಗ್ರಾಮದ ನವೀನ್ (30) ಎಂಬಾತನಾಗಿದ್ದಾನೆ. ಕಳೆದ ನಾಲ್ಕು ವರ್ಷದ ಹಿಂದೆ ನವೀನ್ ದಾವಣಗೆರೆ ಮೂಲದ ಅನ್ನಪೂರ್ಣಳನನ್ನ ಪ್ರೀತಿಸಿ ಮದುವೆಯಾಗಿದ್ದನು. ಇದಾದ ನಂತರ ಕೆಲವು ವರ್ಷಗಳ ಕಾಲ ಇಬ್ಬರೂ ಚೆನ್ನಾಗಿ ಸಂಸಾರವನ್ನೂ ಮಾಡಿದ್ದಾರೆ..ಮಗುವಾದ ನಂತರ ಇಬ್ಬರ ನಡುವೆ ಜಗಳ ಆರಂಭವಾಗಿದೆ. ಸಣ್ಣ ಸಣ್ಣ ವಿಚಾರಕ್ಕೂ ಜಗಳ ಮಾಡುತ್ತಾ ಹಲ್ಲೆ ಮಾಡುತ್ತಿದ್ದ ಗಂಡನ ಕಿರುಕುಳಕ್ಕೆ ಬೇಸತ್ತು ಅನ್ನಪೂರ್ಣಾ ತನ್ನ ತವರುಮನೆ ದಾವಣೆಗೆರೆಗೆ ಬಂದಿದ್ದಾರೆ.
ಹೆಂಡತಿ ತವರು ಮನೆಗೆ ಬಂದ ಅಳಿಯ ನವೀನ್ ನನ್ನ ಹೆಂಡತಿ ಅನ್ನಪೂರ್ಣಳನ್ನು ನನ್ನೊಂದಿಗೆ ಕಳಿಸಿಕೊಡಿ, ಹೊಂದಿಕೊಂಡು ಜೀವನ ಮಾಡುವುದಾಗಿ ಹೇಳಿದ್ದಾನೆ. ಆಗ, ಮಾವನ ಮನೆಯಲ್ಲಿ ಕೆಲವು ಹಿರಿಯರು ಸೇರಿಕೊಂಡು ರಾಜಿ ಪಂಚಾಯಿತಿ ಮಾಡಿ ಕೆಲವು ಷರತ್ತುಗಳನ್ನು ವಿಧಿಸಿ ಮಗಳನ್ನು ಗಂಡನ ಮನೆಗೆ ಕಳಿಸಿಕೊಡಲು ಒಪ್ಪಿಕೊಂಡಿದ್ದಾರೆ. ಇನ್ನು ಮಗಳು ಅನ್ನಪೂರ್ಣ ಅವರ ತಂದೆ ತಾಯಿ ಇಬ್ಬರೂ ಸೇರಿ ಮಗಳನ್ನು ಯಾದಗಿರಿಯಲ್ಲಿರುವ ಗಂಡನ ಮನೆಗೆ ಬಿಡಲು ಬಂದಿದ್ದಾರೆ.ಅತ್ತೆ ಕವಿತಾ, ಮಾವ ಬಸವರಾಜಪ್ಪ ಹಾಗೂ ಹೆಂಡತಿ ಅನ್ನಪೂರ್ಣ ಸೇರಿ ಮೂವರನ್ನೂ ಕಾರಿನಲ್ಲಿ ಕರೆದುಕೊಂಡು ಬಂದಿದ್ದಾನೆ.
ಆಗ ಕಾರನ್ನು ರಸ್ತೆಯ ಮದ್ಯದಲ್ಲಿ ನಿಲ್ಲಿಸಿ ಮೂವರ ಮೇಲೆ ಕಬ್ಬಿಣ ರಾಡ್‌ನಿಂದ ಹಲ್ಲೆ ಮಾಡಿ, ಚಾಕು ಇರಿದು ಭೀಕರವಾಗಿ ಕೊಲೆ ಮಾಡಿದ್ದಾನೆ. ನಂತರ ಹೆಂಡತಿ, ಅತ್ತೆ ಹಾಗೂ ಮಾವ ಸೇರಿ ಮೂವರ ಮೃತದೇಹಗಳನ್ನು ವಡಗೇರ ತಾಲೂಕಿನ ಜೋಳದಡಗಿ ಗ್ರಾಮದ ಬಳಿ ಬೀಸಾಡಿ ಬಂದಿದ್ದಾನೆ. ಯಾದಗಿರಿಯ ಅನ್ನಪೂರ್ಣಳ ಶವವನ್ನ ಪತ್ತೆ ಮಾಡಿರುವ ಪೊಲೀಸರು, ಈಕೆಯ ಗಂಡನನ್ನು ವಶಕ್ಕೆ ಪಡೆಯಲು ಮುಂದಾಗಿದ್ದಾರೆ. ಈ ಘಟನೆ ಕುರಿತಂತೆ ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.