ಮೈಸೂರು:- ಮದ್ಯ ಸೇವನೆಗೆ ಹಣ ಕೊಡದ ತಾಯಿಯನ್ನೇ ಪಾಪಿ ಮಗನೋರ್ವ ಕೊಲೆಗೈದಿರುವ ಘಟನೆ ಪಿರಿಯಾಪಟ್ಟಣ ತಾಲ್ಲೂಕಿನ ನವಿಲೂರ ಗ್ರಾಮದಲ್ಲಿ ಜರುಗಿದೆ.
40 ವರ್ಷದ ಮಗ ಸ್ವಾಮಿ ಎಂಬಾತನಿಂದ 60 ವರ್ಷದ ತಾಯಿ ಜಯಮ್ಮರನ್ನು ಕೊಲೆ ಮಾಡಲಾಗಿದೆ. ಗಂಡನಿಗೆ ಹುಷಾರಿಲ್ಲದ ಕಾರಣ ಜಯಮ್ಮ 90 ಸಾವಿರ ರೂ ಹಣ ಕೂಡಿಟ್ಟಿದ್ದರು. ಇದೇ ಹಣ ನೀಡುವಂತೆ ಮಗ ಪದೇ ಪದೇ ಪೀಡಿಸುತ್ತಿದ್ದ. ಅತ್ತ ತಂದೆ ಆಸ್ಪತ್ರೆಗೆ ತೆರಳಿದ ವೇಳೆ ಇತ್ತ ಮಗ ತನ್ನ ತಾಯಿಯನ್ನು ಕೈಯಿಂದ ಹೊಡೆದು ಕೊಲೆ ಮಾಡಿದ್ದಾನೆ.
ಘಟನೆ ಸಂಬಂಧ ಬೈಲುಕುಪ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರಿಂದ ತನಿಖೆ ಮುಂದುವರಿದಿದೆ.



