ವಿಜಯಸಾಕ್ಷಿ ಸುದ್ದಿ, ಗದಗ : ನಗರದ ಉದ್ದಿಮೆದಾರರಾದ ವಿಷ್ಣುಸಾ ಹನಮಂತಸಾ ಅರವಟಗಿ ತಮ್ಮ ಜನ್ಮದಿನಾಚರಣೆಯಂದು ಪ್ರತಿ ವರ್ಷ ಬಡ ಜನರ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡುತ್ತಾ ಬಂದಿದ್ದಾರೆ. ಇಂತಹ ಸಾಮಾಜಿಕ ಕಾರ್ಯಗಳನ್ನು ಮಾಡುವುದರ ಮೂಲಕ ತಮ್ಮ ಜೀವನವನ್ನು ಸಾರ್ಥಕಪಡಿಸಿಕೊಂಡಿದ್ದಾರೆ.
ಅವರು ಮಂಗಳವಾರ ತಮ್ಮ 56ನೇ ಜನ್ಮ ದಿನಾಚರಣೆಯನ್ನು ಗದುಗಿನ ಚಾಪೇಕರ ಆಸ್ಪತ್ರೆಯಲ್ಲಿ 6 ಜನರ ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಸುವುದರ ಮೂಲಕ ಆಚರಿಸಿಕೊಂಡಿದ್ದು, ಪ್ರತಿ ವರ್ಷ ಈ ಸೇವೆ ಮುಂದುವರೆಸುತ್ತಾ ಬಂದಿರುವ ಇವರು ಇಲ್ಲಿಯವರೆಗೆ ಸುಮಾರು 92 ಜನರ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಸಿ, ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿದ್ದಾರೆ.
ಈ ಸಂದರ್ಭದಲ್ಲಿ ಸುರೇಶ ಮೇರವಾಡೆ, ನರಸಿಂಗಸಾ ಮೇರವಾಡೆ, ಎಮ್.ಯು. ರಾಯಬಾಗಿ, ರಾಜು ಬಸವಾ, ಹೀರಾಸಾ ಬಾಕಳೆ, ಗಣೇಶ ಪವಾರ, ಮಲ್ಲೇಶಪ್ಪ ಅಣ್ಣಿಗೇರಿ, ಪುಂಡಲೀಕ ಪವಾರ, ಬಾಬುರಾವ ಪವಾರ, ವಿಠ್ಠಲ ಅರವಟಗಿ, ಗಜು ಅರವಟಗಿ, ಪವನ ಅರವಟಗಿ, ಹರೀಶ ಅರವಟಗಿ ಇನ್ನಿತರರು ಹಾಜರಿದ್ದರು.