ಯಶಸ್ವಿಯಾಗಿ ನಡೆದ ಮಲೆನಾಡು ಮಹಿಳೆಯರ ಮಹಾಸಂಗಮ

0
Spread the love

ಮಲೆನಾಡು ಮಹಿಳೆಯರ ಮಹಾಸಂಗಮ 2023 ಕಾರ್ಯಕ್ರಮವನ್ನ ಮಲೆನಾಡು ಗೆಳೆಯರ ಸಂಘದ ವತಿಯಿಂದ ಆಯೋಜಿಸಲಾಗಿತ್ತು. ಭಾನುವಾರ ಯಶಸ್ವಿಯಾಗಿ ಕಾರ್ಯಕ್ರಮ ನೆರವೇರಿತು. ಬೆಂಗಳೂರಿನ ದಾಸರಹಳ್ಳಿಯ ಸೌಂದರ್ಯ ಕಾಲೇಜು ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

Advertisement

ಮಲೆನಾಡು ಗೆಳೆಯರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದ ಅಂಗವಾಗಿ ಮಹಿಳೆಯರಿಗೋಸ್ಕರ ಥ್ರೋಬಾಲ್ ಪಂದ್ಯಾವಳಿಯನ್ನು ಆಯೋಜನೆ ಮಾಡಿದ್ದರು. ಸುಮಾರು 15 ಕ್ಕಿಂತ ಹೆಚ್ಚು ತಂಡಗಳು ಈ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದವು. ಈ ಕ್ರೀಡಾಕೂಟದಲ್ಲಿ ಮಲೆನಾಡು ಮಹಿಳೆಯರ ಸಂಘ ಮೊದಲನೆಯ ಬಹುಮಾನವನ್ನು ಪಡೆಯಿತು.


ಅಲ್ಲದೆ ಮಹಿಳೆಯರಿಗಾಗಿ ಹಗ್ಗ ಜಗ್ಗಾಟ ಸ್ಪರ್ಧೆ, ಮಲೆನಾಡ ಸಾಂಸ್ಕೃತಿಕ ಕ್ರೀಡೆಯಾದ ಲಗೋರಿ, ಕಾಯಿಗೆ ಕಲ್ಲು ಹೊಡೆಯುವ ಸ್ಪರ್ಧೆ ಜೊತೆಗೆ ಮಲೆನಾಡ ಸುಗ್ಗಿ ಕುಣಿತ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು. ಎಲ್ಲಾ ಕಾರ್ಯಕ್ರಮದಲ್ಲೂ ಮಹಿಳೆಯರು ಅತಿ ಉತ್ಸಾಹದಿಂದ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ರು.

ಅಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದಂತ ಮಲೆನಾಡ ಸಾಧಕ ಮಹಿಳೆಯರಿಗೆ ಸನ್ಮಾನ ಕಾರ್ಯಕ್ರಮವನ್ನು ಕೂಡ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮ ಯಶಸ್ವಿಯಾಗೋದಕ್ಕೆ ಹಲವು ಗಣ್ಯರು ಕೂಡ ಕೈಜೋಡಿಸಿದ್ದರು. ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಮಂಥರ್ ಗೌಡ, ಹೈಕೋರ್ಟ್ ಮುಖ್ಯ ನ್ಯಾಯಾಧೀಶರಾದ ಶ್ರೀಯುತ ಎಚ್.ಪಿ ಸಂದೇಶ್, ಮಾಜಿ ಸಚಿವೆ ಶ್ರೀಮತಿ ಮೋಟಮ್ಮ ಅವರು ಕೂಡ ಕಾರ್ಯಕ್ರಮಕ್ಕೆ ಆಗಮಿಸಿ ಮಲೆನಾಡ ಜನತೆಯನ್ನು ಬೆಂಬಲಿಸಿ, ಹುರಿದುಂಬಿಸಿದ್ರು.

ಜೊತೆಗೆ ಹಲವು ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಿ ಪ್ರೋತ್ಸಾಹ ನೀಡಿದ್ರು. ಇನ್ನು ಈ ಕಾರ್ಯಕ್ರಮ ಇಷ್ಟು ಯಶಸ್ವಿಯಾಗುವುದಕ್ಕೆ ಮಲೆನಾಡ ಪುರುಷರ ಪಾತ್ರ ಬಹಳ ಮುಖ್ಯ. ಮುಂದೆ ಇದೇ ರೀತಿ ಕಾರ್ಯಕ್ರಮ ಆಯೋಜನೆ ಮಾಡುವುದಕ್ಕೆ ನಿಮ್ಮೆಲ್ಲರ ಸಹಕಾರ ಬೇಕು ಅಂತ ಮಲೆನಾಡು ಗೆಳೆಯರ ಸಂಘದ ಅಧ್ಯಕ್ಷರಾದ ಶ್ರೀಯುತ ಚೆನ್ನೈ ಗೌಡ್ರು ಹೇಳಿದ್ರು.


Spread the love

LEAVE A REPLY

Please enter your comment!
Please enter your name here