ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಚ್ಚರಿಯ ಘಟನೆಯೊಂದು ಬೆಳಕಿಗೆ ಬಂದಿದೆ.
Advertisement
ಬೆಂಗಳೂರಿನ ನೋವೋಟೆಲ್ ಹೋಟೆಲ್ ಬಳಿಯ ಔಟರ್ ರಿಂಗ್ ರೋಡ್ನಲ್ಲಿ ಅರೆಬೆತ್ತಲೆ ಅವಸ್ಥೆಯಲ್ಲಿ ಕಾರಿನ ಮೇಲೆ ಜಿಗಿದ ವ್ಯಕ್ತಿ ಬೋನಟ್ ಮೇಲೆ ಕುಳಿತುಬಿಟ್ಟಿದ್ದಾನೆ. ವಾಹನ ಚಾಲಕ ಕಾರು ಚಲಾಯಿಸಲು ಮುಂದಾದರೂ ಅಟ್ಟಿಸಿಕೊಂಡು ಬಂದು ಮತ್ತೊಮ್ಮೆ ಕಾರಿನ ಮೇಲೆ ಜಿಗಿದಿದ್ದಾನೆ. ಈತನ ದುರ್ವರ್ತನೆ ಕಂಡು ನೆಟ್ಟಿಗರು ಹಲವಾರು ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹೆಚ್ಚಿನ ಟ್ರಾಫಿಕ್ ಸಮಯದಲ್ಲಿ ಓಡಾಡುತ್ತಿರುವ ವಾಹನಗಳನ್ನೂ ಲೆಕ್ಕಿಸದೆ ವ್ಯಕ್ತಿಯೊಬ್ಬ ಕಾರಿನ ಮೇಲೆ ಹಠಾತ್ತನೆ ಜಿಗಿದಿದ್ದಾನೆ. ಅರೆಬೆತ್ತಲೆ ಅವಸ್ಥೆಯಲ್ಲಿದ್ದ ಈತ ವಾಹನದ ಬೋನೆಟ್ ಮೇಲೆ ಕುಳಿತಿದ್ದ. ವಾಹನ ಚಾಲಕ ಕಾರನ್ನು ಚಲಾಯಿಸಲು ಮುಂದಾದರೂ ಆತನ ಮೇಲೆ ಕಿರುಚಾಡಿ ಅಸಭ್ಯ ವರ್ತನೆ ತೋರಿದ್ದಾನೆ. ಈ ವೀಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.