ವಿಜಯಸಾಕ್ಷಿ ಸುದ್ದಿ, ಗದಗ: ಆತಂಕವಾದಿಗಳು ಪುಲ್ವಾಮಾದಲ್ಲಿ ನಮ್ಮ ಸೈನಿಕರನ್ನು ಹತ್ಯೆ ಮಾಡಿದಾಗ ಅದಕ್ಕೆ ಪ್ರತ್ಯುತ್ತರವಾಗಿ ಬಾಲಾಕೋಟ್ ದಾಳಿ ನಡೆಸಿದ್ದ ಕೇಂದ್ರ ಸರ್ಕಾರ ಈಗ ಪಹಲ್ಗಾಮ್ ನರಮೇಧಕ್ಕೆ ಉತ್ತರವಾಗಿ ಆಪರೇಶನ್ ಸಿಂಧೂರ ಕೈಕೊಂಡಿದ್ದು, ಇದು ಭಾರತೀಯರ ಪರಾಕ್ರಮದ ಸಂಕೇತವಾಗಿದೆ ಎಂದು ಬಿಜೆಪಿ ಮುಖಂಡರು ಹಾಗೂ ಉಸಿರು ಫೌಂಡೇಶನ್ ಅಧ್ಯಕ್ಷರಾದ ಶರಣ್ ಪಾಟೀಲ ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪ್ರಧಾನಿ ಮೋದಿಯವರ ದೇಶಪ್ರೇಮ ಎಂಥದ್ದು ಎನ್ನುವುದಕ್ಕೆ ಈ ದಾಳಿ ಸಾಕ್ಷಿಯಾಗಿದ್ದು, ಉಗ್ರರನ್ನು ಸಾಕುತ್ತಾ ಬಂದಿದ್ದ ಪಾಕಿಸ್ತಾನ ಈ ದಾಳಿಯಿಂದ ಬೆಚ್ಚಿಬಿದ್ದಿದೆ. ಭಯೋತ್ಪಾದಕರ ನೆಲೆಗಳೆಲ್ಲ ಕ್ಷಿಪಣಿ ದಾಳಿಯಿಂದ ನಾಶವಾಗಿದ್ದು, ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ಭಾರತಕ್ಕೆ ಆಪತ್ತು ತಂದೊಡ್ಡಬಲ್ಲ ಎಲ್ಲಾ ಉಗ್ರ ಸಂಘಟನೆಗಳನ್ನು ಸಂಪೂರ್ಣವಾಗಿ ನಾಶ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪಹಲ್ಗಾಮ್‌ನಲ್ಲಿ ಭಾರತೀಯರನ್ನು ಕೊಂದು ಹಾಕಿದರೂ, ಕಾಂಗ್ರೆಸ್‌ನವರು ಶಾಂತಿ ಜಪ ಮಾಡಬೇಕೆಂದು ಹೇಳುತ್ತಿದ್ದು, ಇಂಥ ದೇಶದ್ರೋಹಿ ಮನಸ್ಥಿತಿಯ ಕಾಂಗ್ರೆಸ್ಸಿಗರಿಗೆ ಈ ದಾಳಿಯನ್ನು ಸಂಭ್ರಮಿಸುವ ಯಾವುದೇ ನೈತಿಕತೆ ಇಲ್ಲ ಎಂದಿರುವ ಅವರು, ಭಾರತವನ್ನು ಯಾರೇ ಕೆಣಕಿದರೂ ಅವರಿಗೆ ತಕ್ಕ ಉತ್ತರ ನೀಡಲು ಮೋದಿ ಸರ್ಕಾರ ಸದಾ ಸಿದ್ಧವಾಗಿದೆ ಎಂದಿದ್ದಾರೆ.