ವಿಜಯಸಾಕ್ಷಿ ಸುದ್ದಿ, ಗದಗ : ತಾಲೂಕಿನ ಲಿಂಗಧಾಳದ ಸರ್ಕಾರಿ ಪ್ರೌಢಶಾಲೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಹಾಗೂ ಶಾಲಾ ಗುರುಬಳಗದ ಸಹಯೋಗದಲ್ಲಿ 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಗದಗ ಜಿಲ್ಲೆಗೆ ಕನ್ನಡ ಮಾಧ್ಯಮದಲ್ಲಿ ದ್ವಿತೀಯ ಸ್ಥಾನ ಪಡೆದು ಜಿಲ್ಲೆಗೆ ಕೀರ್ತಿ ತಂದ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿನಿ ಸೌಜನ್ಯ ಶಿಡ್ಲನ್ನವರ ಅವರ ನಿವಾಸಕ್ಕೆ ತೆರಳಿ ಸನ್ಮಾನಿಸಿ ಅಭಿನಂದಿಸಲಾಯಿತು.
ಸಾಧನೆಗೈದ ವಿದ್ಯಾರ್ಥಿನಿಯ ಕುರಿತು ಎಸ್‌ಡಿಎಂಸಿ ಅಧ್ಯಕ್ಷ ಉಮೇಶ್ ಗುಳೇದ, ಮುಖ್ಯೋಪಾಧ್ಯಾಯೆ ಪಾರ್ವತಿ ಎಸ್.ಸಜ್ಜನ, ಮರಿಯಪ್ಪ ಕೊಂಡಿಕೊಪ್ಪ, ರಾಜು ಜಾನೋಪಂತರ, ಶಾಂತಕುಮಾರ ಭಜಂತ್ರಿ ಸಂದರ್ಭೋಚಿತವಾಗಿ ಮಾತನಾಡಿದರು.
ಶಾಲೆಗೆ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಾದ ಕೀರ್ತಿ ಲಿಂಗನಗೌಡ್ರ ಮತ್ತು ದೇವರಾಜ್ ಗೋನಾಳ, ಉನ್ನತ ದರ್ಜೆಯಲ್ಲಿ ತೆರ್ಗಡೆ ಹೊಂದಿದ ವಿದ್ಯಾರ್ಥಿಗಳಾದ ಸುಕನ್ಯಾ ತೋರಗಲ್, ಸ್ಪಂದನ ನವಲಗುಂದ ಇವರನ್ನು ಸ್ಮರಿಸಲಾಯಿತು.
ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಉಪಾಧ್ಯಕ್ಷೆ ಜಯಶ್ರೀ ಬಡಿಗೇರ, ಸಹ ಶಿಕ್ಷಕರಾದ ಆರ್.ಎಂ. ಬಿಂಗಿ, ಆರ್.ವೈ. ಮ್ಯಾಗೇರಿ, ಆನಂದಕುಮಾರ್ ಟಿ.ಮೇಗಡಿ, ಮರಿಯಪ್ಪ ಕೊಂಡಿಕೊಪ್ಪ, ರಾಜು ಜಾನೋಪಂತರ, ಗುರುಸಿದ್ದಪ್ಪ ಅಂಗಡಿ, ವೀರಪ್ಪ ಕೌತಾಳ, ಗ್ರಾ.ಪಂ ಸದಸ್ಯೆ ಹನುಮವ್ವ ಶಿಡ್ಲಣ್ಣವರ ಹಾಗೂ ಕುಟುಂಬ ವರ್ಗದವರು ಹಾಜರಿದ್ದರು.