ಮಂಡ್ಯ:-ಭೀಕರ ರಸ್ತೆ ಅಪಘಾತ ಸಂಭವಿಸಿ ಲಾರಿ ಹರಿದು ಬೈಕ್ ಸವಾರ ದುರ್ಮರಣ ಹೊಂದಿದ ಘಟನೆ ಮಳವಳ್ಳಿ ತಾಲೂಕಿನ ಮೂರ್ಕಾಲು ಗೇಟ್ ಬಳಿ ಜರುಗಿದೆ.
Advertisement
ತುಂಡಾದ ವ್ಯಕ್ತಿ ದೇಹ ಛಿದ್ರ-ಛಿದ್ರವಾಗಿದೆ. ಘಟನೆಯಲ್ಲಿ ಲಾರಿ ಹರಿದು ಸವಾರ ದುರ್ಮರಣ ಹೊಂದಿದ್ದರೆ, ಮತ್ತೊಬ್ಬನಿಗೆ ಗಂಭೀರ ಗಾಯವಾಗಿದೆ. ಕೂದೇನಕೊಪ್ಪಲು ಗ್ರಾಮದ ಕರಿಯಪ್ಪ(56) ಸ್ಥಳದಲ್ಲೆ ಸಾವನ್ನಪ್ಪಿದ ವ್ಯಕ್ತಿ ಎನ್ನಲಾಗಿದೆ.
ಗಾಯಾಳು ಬಸವೇಗೌಡಗೆ ಗಂಭೀರ ಗಾಯವಾಗಿದ್ದು, ಅಪಘಾತದ ತೀವ್ರತೆಗೆ ವ್ಯಕ್ತಿ ದೇಹ ತುಂಡಾಗಿ ಛಿದ್ರವಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಿರಗಾವಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.