ಸಿದ್ದು ಪಾಟೀಲ ಸಹೋದರ ಚೆನ್ನವೀರಗೌಡ ಪಾಟೀಲ ಹಾಗೂ ಸ್ನೇಹಿತರು ಶಬರಿಗೆ ಹೊರಟಿದ್ದರು….
ಗದಗ/ವಿಜಯನಗರ:
ಗದಗನಿಂದ ಶಬರಿಗೆ ಕಾರಿನಲ್ಲಿ ತೆರಳುತ್ತಿದ್ದ ಅಯ್ಯಪ್ಪ ಭಕ್ತರಿದ್ದ ಕಾರ್ ಡಿವೈಡರ್ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಇಬ್ಬರು ಮೃತಪಟ್ಟು, ಮೂವರು ಗಾಯಗೊಂಡ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾನಹೊಸಳ್ಳಿ ಗ್ರಾಮದ ಬಳಿ ಮಂಗಳವಾರ ಬೆಳಗಿನ ಜಾವ ನಡೆದಿದೆ.
ಮೃತರನ್ನು ಜಿಲ್ಲಾ ಪಂಚಾಯತಿಯ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಸಿದ್ಧಲಿಂಗೇಶ್ವರ ಪಾಟೀಲ ಅವರ ಸಹೋದರ ಚೆನ್ನವೀರಗೌಡ ಎಚ್ ಪಾಟೀಲ (29) ಹಾಗೂ ಯುವರಾಜ್ ಕಾಶಪ್ಪ ಹೂಗಾರ (22) ಮೃತಪಟ್ಟಿದ್ದು, ಚಾಲಕ ಚಿದಂಬರ ಕುಲಕರ್ಣಿ, ವೀರಣ್ಣ ಸಂಗಳದ ಹಾಗೂ ಮಂಜುನಾಥ್ ತಳವಾರ ಗಂಭೀರವಾಗಿ ಗಾಯಗೊಂಡಿದ್ದಾರೆ.
ಇದನ್ನೂ ಓದಿ ವಿದ್ಯುತ್ ಸ್ಪರ್ಶಿಸಿ ಮೂವರು ಯುವಕರು ಸಾವು, ಮೂವರು ಗಂಭೀರ; ಲಕ್ಷ್ಮೇಶ್ವರ ತಾಲೂಕಿನಲ್ಲಿ ದಾರುಣ ಘಟನೆ
ಅಪಘಾತಕ್ಕೀಡಾದ ಕಾರು ನಜ್ಜುಗುಜ್ಜಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಚೆನ್ನವೀರಗೌಡ ಹಾಗೂ ಯುವರಾಜ್ನನ್ನು ಜಗಳೂರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯ ಅಸುನೀಗಿದ್ದಾರೆ.
ಇದನ್ನೂ ಓದಿ ಪೊಲೀಸ್ ವಾಹನಕ್ಕೆ ಸ್ಕೂಟಿ ಡಿಕ್ಕಿ; ಮತ್ತೊಬ್ಬ ಯಶ್ ಅಭಿಮಾನಿ ಸಾವು, ಎಸ್ಪಿ ನೇಮಗೌಡ ಮಾಹಿತಿ
ಗಾಯಗೊಂಡ ಮೂವರನ್ನು ದಾವಣಗೆರೆ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ.
ಕಾನಹೊಸಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ಎರಿಯಪ್ಪ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.