ಬೆಂಗಳೂರು:- ಮನೆ ಮುಂದೆ ಮೊಬೈಲ್ ನಲ್ಲಿ ಮಾತನಾಡುತ್ತಾ ನಿಂತಿದ್ದ ಮಹಿಳೆಯ ಸರ ಕದ್ದು ಕಳ್ಳನೋರ್ವ ಕ್ಷಣಾರ್ಧದಲ್ಲಿ ಎಸ್ಕೇಪ್ ಆಗಿರುವ ಘಟನೆ ರಾಮಮೂರ್ತಿನಗರದ ಪಂಪಮ್ಮ ಲೇಔಟ್ ನಲ್ಲಿ ಜರುಗಿದೆ.
ಮಹಿಳೆ ಮೊಬೈಲ್ ನಲ್ಲಿ ಬ್ಯೂಸಿ ಆಗಿರುವುದನ್ನು ಗಮನಿಸಿದ ಕಳ್ಳ, ಒಂದು ಕೈನಲ್ಲಿ ಬೈಕ್ ಡ್ರೈವ್ ಮಾಡುತ್ತಾ, ಮತ್ತೊಂದು ಕೈನಲ್ಲಿ ಸರ ಕಿತ್ತುಕೊಂಡು ಕ್ಷಣಾರ್ಧದಲ್ಲಿ ಎಸ್ಕೇಪ್ ಆಗಿದ್ದಾನೆ. ಕಳ್ಳನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವೃತ್ತಿಯಲ್ಲಿ ಅಕೌಂಟೆಂಟ್ ಆಗಿರುವ ಭಾನುಮತಿ ಎಂಬುವವರು ತಮ್ಮ ಮನೆ ಮುಂದೆ ನಿಂತಿದ್ರು. ಮೊಬೈಲ್ ನಲ್ಲಿ ಮಾತಾಡೋದನ್ನ ಗಮನಿಸಿರೋ ಸರಗಳ್ಳ ಶರವೇಗದಲ್ಲಿ ಸರ ಕಿತ್ತು ಪರಾರಿ ಆಗಿದ್ದಾನೆ. ಮೂರು ಲಕ್ಷ ಮೌಲ್ಯದ 70 ಗ್ರಾಂ ಚಿನ್ನಾಭರಣ ಕಳೆದುಕೊಂಡ ಮಹಿಳೆ ಕಂಗಾಲಾಗಿದ್ದು, ರಾಮಮೂರ್ತಿ ನಗರ ಠಾಣೆಗೆ ದೂರು ಕೊಟ್ಟಿದ್ದಾರೆ. ದೂರಿನ ಅನ್ವಯ ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.