ಚಾಮರಾಜನಗರ:- ಚಾಮರಾಜನಗರ ಪಟ್ಟಣದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗ್ರಾಹಕರ ಸೋಗಿನಲ್ಲಿ ಜ್ಯುವೆಲರಿ ಶಾಪ್‌ಗೆ ಹೋಗಿ ಚಿನ್ನದ ಸರ ಎಗರಿಸುತ್ತಿದ್ದ ಖತರ್ನಾಕ್ ಕಳ್ಳಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
Advertisement
ಬಂಧಿತ ಕಳ್ಳಿಯನ್ನು ಲೀಲಾ ಎಂದು ಗುರುತಿಸಲಾಗಿದೆ. ಈಕೆ ಆಭರಣ ಖರೀದಿಸುವ ನೆಪದಲ್ಲಿ ಚಾಮರಾಜನಗರದ ಜ್ಯುವೆಲರಿ ಶಾಪ್‌ಗೆ ಎಂಟ್ರಿ ಕೊಟ್ಟು, 9 ಗ್ರಾಂ ಚಿನ್ನದ ಸರ ಹಾಗೂ ಪಿರಿಯಾಪಟ್ಟಣದಲ್ಲಿ 5 ಗ್ರಾಂನ ಒಡವೆಯನ್ನು ಕಳ್ಳತನ ಮಾಡಿದ್ದಳು.
ಅಂಗಡಿಯ ಸಿಬ್ಬಂದಿಯನ್ನು ಯಾಮಾರಿಸಿ ಆರೋಪಿತೆ ಚಿನ್ನ ಕಳ್ಳತನ ಮಾಡುತ್ತಿದ್ದಳು. ಕಳ್ಳಿಯ ಕೈಚಳಕದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದೀಗ ಖತರ್ನಾಕ್ ಕಳ್ಳಿಯನ್ನು ಚಾಮರಾಜನಗರ ಪಟ್ಟಣ ಪೊಲೀಸರು ಬಂಧಿಸಿದ್ದು, ತನಿಖೆ ಕೈಗೊಡಿದ್ದಾರೆ.