ಮುಂಬೈ:- ಮುಂಬೈನ ನೈಗಾಂವ್‌ನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಮೂರು ವರ್ಷದ ಪುಟ್ಟ ಮಗುವೊಂದು 12ನೇ ಮಹಡಿಯಿಂದ ಬಿದ್ದು ಮೃತಪಟ್ಟ ಘಟನೆ ಜರುಗಿದೆ.
Advertisement
ತಾಯಿ ತನ್ನ ಅಪಾರ್ಟ್‌ಮೆಂಟ್‌ನ ಹೊರಗೆ ಶೂ ರ‍್ಯಾಕ್ ಮೇಲೆ ಕೂರಿಸಿದಾಗ ಆಕಸ್ಮಿಕವಾಗಿ ಮಗು ಕಿಟಕಿ ಮೂಲಕ ಕೆಳಗೆ ಬಿದ್ದಿದೆ. ಮಂಗಳವಾರ ರಾತ್ರಿ 8:15ಕ್ಕೆ ಈ ಘಟನೆ ಸಂಭವಿಸಿದೆ. ಬಾಲಕಿಯ ತಾಯಿ ಚಪ್ಪಲಿ ಹಾಕಿಸಿಕೊಳ್ಳಲು ಪ್ರಯತ್ನಿಸುವಾಗ ಅವಳನ್ನು ಶೂ ರ‍್ಯಾಕ್ ಮೇಲೆ ಕೂರಿಸಿದ್ದಳು. ತಾಯಿ ಚಪ್ಪಲಿ ಹಾಕುತ್ತಿದ್ದಾಗ ಬಾಲಕಿ ಹಿಂದಕ್ಕೆ ಬಾಗಿದ್ದಾಳೆ. ಈ ವೇಳೆ ನಿಯಂತ್ರಣ ತಪ್ಪಿ ಕಿಟಕಿಯಿಂದ ಕೆಳಗೆ ಬಿದ್ದಿದ್ದಾಳೆ.
ತಾಯಿಯ ಕಿರುಚಾಟ ಕೇಳಿದ ನಂತರ ನೆರೆಹೊರೆಯವರು ಸಹಾಯಕ್ಕೆ ಧಾವಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿಯನ್ನು ಆಸ್ಪತ್ರೆ ದಾಖಲಿಸಲಾಗಿತ್ತು. ಆದರೆ ಅಷ್ಟರಲ್ಲೇ ಆಕೆ ಮೃತಪಟ್ಟಿದ್ದಳು. ಮಗು ಕಳೆದುಕೊಂಡ ತಾಯಿ ಆಕ್ರಂದನ ಮುಗಿಲು ಮುಟ್ಟಿದೆ.