ಗದಗ:- ಜಿಲ್ಲೆಯಲ್ಲಿ ಸುರಿದ ಭಾರೀ ಗಾಳಿ, ಮಳೆಗೆ ಅವಾಂತರ ಒಂದು ಸೃಷ್ಟಿ ಆಗಿದೆ. ಜೋರಾಗಿ ಬೀಸಿದ ಬಿರುಗಾಳಿಗೆ ತಗಡಿನ ಶೆಡ್ ಮನೆ ಛಿದ್ರ ಛಿದ್ರವಾಗಿದೆ. ಅದೃಷ್ಟವಶಾತ್ ಪವಾಡ ಸದೃಶ ಎಂಬಂತೆ ಇಬ್ಬರು ಅತ್ತೆ-ಸೊಸೆ ಬಚಾವ್ ಆಗಿದ್ದಾರೆ.
ಅತ್ತೆ ಮಲ್ಲಮ್ಮ(68), ಸೊಸೆ ಜಯವ್ವ(38) ಬಚಾವ್ ಆದ ಮಹಿಳೆಯರು. ಇನ್ನೂ ಗದಗ ತಾಲೂಕಿನ ಪಾಪನಾಶಿಯ ಸುತ್ತಮುತ್ತ ಭಾರಿ ಮಳೆ ಸುರಿದಿದ್ದು, ಅಲ್ಲಿನ ಜನ ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. ಅದರಂತೆ ನಿನ್ನೆ ಸಂಜೆ ವೇಳೆ ಬಿರುಗಾಳಿಗೆ ಶೆಡ್ ತಗಡುಗಳು ಕಿಲೋಮೀಟರ್ ದೂರ ಗಾಳಿಗೆ ಹಾರಿ ಹೋಗಿದೆ. ಅಲ್ಲದೇ ಸಿಮೆಂಟ್ ಬ್ಲಾಕ್ ಗಳು ಚೆಲ್ಲಾಪಿಲ್ಲಿ ಆಗಿದ್ದವು.
ಗಾಯಾಳು ಮಹಿಳೆಯರಿಗೆ ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಳಿ, ಮಳೆಯ ಆರ್ಭಟಕ್ಕೆ ಜನತೆ ಕಂಗಾಲಾಗಿದ್ಜು, ಹತ್ತಾರು ಗಿಡ, ಮರಗಳು ನೆರಕ್ಕುರುಳಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.



