ಹಾವೇರಿ: ಹಾವೇರಿಯಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಅನಾಹುತಗಳು ಸಂಭವಿಸುತ್ತಿದೆ. ಭಾರಿ ಮಳೆಗೆ ಮರವೊಂದು ಉರುಳಿ, ನೇರವಾಗಿ ಸವಾರರ ಮೇಲೆ ಬಿದ್ದು ಮೃತಪಟ್ಟಿರುವ ಘಟನೆ ಹಿರೇಕೆರೂರು ಪಟ್ಟಣದಲ್ಲಿ ನಡೆದಿದೆ. ಹಿರೇಕೆರೂರಿನಲ್ಲಿ ಹೆಸ್ಕಾಂ ನೌಕರರಾಗಿದ್ದ ಮಂಜುನಾಥ (35),
ಹನುಮಂತಪ್ಪ (25) ಮೃತ ದುರ್ದೈವಿಗಳಾಗಿದ್ದು, ಊಟ ಮುಗಿಸಿ ಹೆಸ್ಕಾಂ ಕಚೇರಿಗೆ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಏಕಾಏಕಿ ಮರವೊಂದು ಉರುಳಿ ಬಿದ್ದಿದೆ. ಮರ ಬಿದ್ದ ರಭಸಕ್ಕೆ ಇಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಹಿರೇಕೆರೂರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.



