ವಿಜಯಸಾಕ್ಷಿ ಸುದ್ದಿ, ಗದಗ; ಮುದ್ರಣಕಾಶಿ ಮುದ್ರಣ ಕುಶಲ ಕೆಲಸಗಾರರ ಸಂಘ ಗದಗ ವತಿಯಿಂದ ಮುದ್ರಣದ ಪಿತಾಮಹ ಜೋಹಾನ್ಸ್ ಗುಟೆನ್‌ಬರ್ಗ್ ದಿನಾಚರಣೆಯನ್ನು ಸ್ಟೇಶನ್ ರಸ್ತೆಯ ಸಜ್ಜನ ಪ್ರಿಂಟಿಂಗ್ ಪ್ರೆಸ್‌ನಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮುದ್ರಣ ಕೆಲಸಗಾರರಾದ ಸಿದ್ದಪ್ಪ ಹುಬ್ಬಳ್ಳಿ, ಕೃಷ್ಣಪ್ಪ ಗುಂಡಗಿ, ಶಂಕರಪ್ಪ ಗಂಜಿ, ಮಂಜು ಮಾಗುಂಡ, ಈರಪ್ಪ ಬೇವಿನಮರದ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು. ಸನ್ಮಾನ
ಗೌರವಾಧ್ಯಕ್ಷ ಸಿದ್ದಲಿಂಗಪ್ಪ ಅರಳಿ, ಪ್ರಧಾನ ಕಾರ್ಯದರ್ಶಿ ಪರಶುರಾಮ ಬಾರಾಟಕ್ಕೆ ಸ್ವಾಗತಿಸಿದರು. ಖಜಾಂಚಿ ಶ್ರೀಧರ ಖಟವಟೆ ಮುದ್ರಣಕಾರರು ಅನುಭವಿಸುತ್ತಿರುವ ಸಂಕಷ್ಟಗಳನ್ನು ಹೇಳಿಕೊಂಡರು. ಸದಸ್ಯರುಗಳಾದ ಅಶೋಕ ಆಫ್‌ಸೆಟ್, ಎಂ.ವಿ. ಅರಳಿ ಪ್ರಿಂಟಿಂಗ ಪ್ರೆಸ್, ಜಗಜ್ಯೋತಿ ಪ್ರಿಂಟರ್ಸ್ ದೇವ ಕಂಪ್ಯೂಟರ್ಸ್, ರಾಹುತ ಡಿ.ಟಿ.ಪಿ., ಸೋಳಂಕಿ ಸ್ಕ್ರೀನ್ಸ್ ಮತ್ತಿತರರು ಉಪಸ್ಥಿತರಿದ್ದರು. ಕೊನೆಯಲ್ಲಿ ಶಿವರಾಜ ಮೂರಶಿಳ್ಳಿನ ವಂದಿಸಿದರು.