ವಾಷಿಂಗ್ಟನ್:- ಲಕ್ಷಾಂತರ ಜೇನುನೊಣಗಳನ್ನು ಸಾಗಿಸುತ್ತಿದ್ದ ಟ್ರಕ್ ಪಲ್ಟಿ ಹೊಡೆದಿರುವ ಘಟನೆ ಅಮೆರಿಕದ ವಾಷಿಂಗ್ಟನ್ನಲ್ಲಿ ಜರುಗಿದೆ.
Advertisement
31,730 ಕೆಜಿ ತೂಕದ ಜೇನುಗೂಡುಗಳನ್ನು ಸಾಗಿಸಲಾಗುತ್ತಿತ್ತು. ಕೆನಡಾದ ಗಡಿಯ ಬಳಿ ಟ್ರಕ್ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿತ್ತು.. 24 ರಿಂದ 48 ಗಂಟೆಗಳ ಒಳಗೆ ಜೇನುನೊಣಗಳು ತಮ್ಮ ಜೇನುಗೂಡುಗಳಿಗೆ ಮರಳುತ್ತವೆ ಎಂದು ಅಧಿಕಾರಿಗಳು ಭರವಸೆ ವ್ಯಕ್ತಪಡಿಸಿದರು.
ಜೇನುನೊಣಗಳ ಹಿಂಡುಗಳ ಅಪಾಯವಿರುವ ಕಾರಣ ಜನರು ಈ ಪ್ರದೇಶದಿಂದ ದೂರವಿರಬೇಕೆಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.