ನಕಲಿ ಆಧಾರ್ ಪ್ರಕರಣಕ್ಕೆ ಟ್ವಿಸ್ಟ್, ವಿದೇಶಿ ಯುವತಿಯರಿಗೆ ಆಧಾರ್ ಕಾರ್ಡ್ ಮಾಡಿ ಸಚಿವರ ಆಪ್ತ ಲಾಕ್?

0
Spread the love

ಬೆಂಗಳೂರು:ಸಚಿವ ಭೈರತಿ ಸುರೇಶ್ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಮೌನೇಶ್ ಕುಮಾರ್ ನಕಲಿ ಆಧಾರ್ ಕಾರ್ಡ್, ವೋಟರ್ ಕಾರ್ಡ್ ಜಾಲದಲ್ಲಿ ಸಿಕ್ಕಿಬಿದ್ದ ಸ್ಟೋರಿಯನ್ನ ಪ್ರಜಾ ಟಿವಿ ಸುದ್ದಿ ಭಿತ್ತರಿಸಿತ್ತು. ಸದ್ಯ ಅದೇ ಕೇಸ್ ಮುಂದುವರಿದ ಭಾಗವಾಗಿ ಎಕ್ಸ್ ಕ್ಲೂಸಿವ್ ಸುದ್ದಿಯನ್ನ ಬ್ರೇಕ್ ಮಾಡ್ತಿದೆ. ಅದೇನಂದ್ರೆ ಹೆಬ್ಬಾಳದ ಕನಕನಗರದ ಎಂಎಸ್ಎಲ್ ಟೆಕ್ನೋ ಸಲೂಶನ್ ಸೆಂಟರ್ ನಲ್ಲಿ ನಕಲಿ ಆಧಾರ್ ಕಾರ್ಡ್, ವೋಟರ್ ಐಡಿ ಸೇರಿದಂತೆ ಕೆಲ ದಾಖಲಾತಿ‌ ಮಾಡ್ತಿದ್ದಾರೆ ಅಂತ ಸಿಸಿಬಿ ದಾಳಿ‌ ನಡೆಸಿ ಕೇಸ್ ದಾಖಲಿಸುತ್ತು. ಇದ್ರ ಮೂಲ ಬಾಂಗ್ಲ‌ದೇಶ ಅನ್ನೋದು ಪತ್ತೆಯಾಗಿದೆ. ಸಚಿವ ಭೈರತಿ ಸುರೇಶ್ ಆಪ್ತ ಅಂತ ಗುರುತಿಸಿಕೊಂಡಿದ್ದ ಮೌನೇಶ್ ಈ ಹಿಂದೆ ನಾಲ್ಕು ಬಾಂಗ್ಲ ಯುವತಿಯರಿಗೆ ನಕಲಿ ಆಧಾರ್ ಕಾರ್ಡ್ ಮಾಡಿಕೊಟ್ಟಿದ್ನಂತೆ.

Advertisement

ಸಿಸಿಬಿ ಪೊಲೀಸ್ರು ವಿದ್ಯಾರಣ್ಯಪುರದ ವೈಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿತ್ತು. ಕಮಲ್ ಅನ್ನೋ ವ್ಯಕ್ತಿ ಕಳೆದ ಎಂಟು ವರ್ಷದಿಂಸ ಹೋರ ರಾಜ್ಯ ಹಾಗೂ ಬಾಂಗ್ಲ ಯುವತಿಯರನ್ನ ಅಕ್ರಮವಾಗಿ ಇಟ್ಟುಕೊಂಡು ವೈಶ್ಯವಾಡಿಕೆ‌ ಧಂಧೆ ನಡೆಸ್ತಿದ್ದ.‌ಈವೇಳೆ ಸಿಸಿಬಿ ಪೊಲೀಸ್ರು ದಾಳಿ ನಡೆಸಿ ಕಮಲ್ ಪ್ರದೀಪ್ ಎಂಬುವರನ್ನ ಬಂಧಿಸಿ, ನಾಲ್ವರು ಯುವತಿರನ್ನ ರಕ್ಷಣೆ ಮಾಡಿದ್ದಾರೆ. ತನಿಖೆ ವೇಳೆ ಬಾಂಗ್ಲ ಯುವತಿಯರಿಗೆ ಅಕ್ರಮವಾಗಿ ದೇಶದ ಸಾರ್ವಭೌಮತ್ವ ಸಿಕ್ಕಿರೋದು ಪತ್ತೆಯಾಗಿದೆ. ಇದ್ರ ಬಗ್ಗೆ ತನಿಖೆ ನಡೆಸಿದಾಗ ಕಮಲ್ ಸಚಿವರ ಆಪ್ತನ ಸೈಬರ್ ಸೆಂಟರ್ ತೋರಿಸಿದ್ದು. ಇದೇ ಸೆಂಟರ್ ನಲ್ಲಿ ನಕಲಿ ಆಧಾರ್ ಕಾರ್ಡ್ ಮಾಡಿಸಿದ್ದಾಗಿ ಬಾಯಿ ಬಿಟ್ಟಿದ್ದಾಗಿ ಮಾಹಿತಿ ಸಿಕ್ಕಿದೆ.

ಇನ್ನೂ ಅಕ್ರಮವಾಗಿ ಮೌನೇಶ್ ಇನ್ನೂ ಅದೆಷ್ಟು ಆಧಾರ್ ಕಾರ್ಡ್,ವೋಟರ್ ಐಡಿ ಗಳನ್ನ ಅದ್ಯಾವವ ದೇಶದವರಿಗೆ ಮಾಡಿಕೊಟ್ಟಿದ್ದಾನೋ ಇದ್ರಿಂದ ದೇಶಕ್ಕೆ ಅದ್ಯಾವ ಕಂಟಕ‌ಕಾದಿದ್ಯೋ ಅನ್ನೋದು ತನಿಖೆಯಿಂದಷ್ಟೇ ಗೊತ್ತಾಗಬೇಕಿದೆ. ಆದ್ರೆ ದೇಶದ ಸಾರ್ವಭೌಮತ್ವ ನಕಲು‌ ಪ್ರಕರಣದಲ್ಲಿ ಬಂಧಿಯಾದ ಆರೋಪಿಯನ್ನ ಪೊಲೀಸ್ರು ಸ್ಟೇಷನ್ ಬೇಲ್ ಮಾಡಿ ಕಳುಹಿಸಿರೋದು ನೋಡಿದ್ರೆ ಆರೋಪಿ ಮೌನೇಶ್ ಅದೆಸ್ಟು ಪ್ರಭಾವಿ ಅನ್ನೋದನ್ನ ಯೋಚನೆ ಮಾಡಬೇಕು.


Spread the love

LEAVE A REPLY

Please enter your comment!
Please enter your name here