ಬೆಂಗಳೂರು:- ರಸ್ತೆ ದಾಟುತ್ತಿದ್ದ ಕಾಡಾನೆಗೆ ವಾಹನ ಡಿಕ್ಕಿ ಹೊಡೆದ ಹಿನ್ನೆಲೆ, ಗಜರಾಜ ನರಳಿ-ನರಳಿ ಪ್ರಾಣಬಿಟ್ಟ ಘಟನೆ ಬನ್ನೇರುಘಟ್ಟದಲ್ಲಿ ಜರುಗಿದೆ.
ಬನ್ನೇರುಘಟ್ಟ ತಟ್ಟೆಕೆರೆ ಅರಣ್ಯ ವ್ಯಾಪ್ತಿಯಲ್ಲಿ ಬರುವ ಹುರುಗನ ದೊಡ್ಡಿಯಲ್ಲಿ ಬೆಳಗ್ಗೆ ಕಾಡಾನೆ ರಸ್ತೆ ದಾಟುತ್ತಿದ್ದಾಗ ವಾಹನ ಡಿಕ್ಕಿ ಹೊಡೆದಿದೆ. ತೀವ್ರ ಗಾಯಗೊಂಡಿದ್ದ ಕಾಡಾನೆ ಎರಡು ಗಂಟೆಗೂ ಹೆಚ್ಚು ಕಾಲ ರಸ್ತೆಯಲ್ಲೇ ನರಳಾಡಿದೆ.
ಗಂಭೀರವಾಗಿ ಗಾಯಗೊಂಡಿದ್ದ ಆನೆ ಕೊನೆಗೆ ರಸ್ತೆಯಲ್ಲೇ ಸಾವನ್ನಪ್ಪಿದೆ. ಸ್ಥಳಕ್ಕೆ ಬನ್ನೇರುಘಟ್ಟ ವೈದ್ಯರ ತಂಡ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.



