ಕೊಪ್ಪಳ:- ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಭಾರೀ ವೈರಲ್ ಆಗುತ್ತಿದೆ. ಅಂಗನವಾಡಿಯೊಂದರಲ್ಲಿ ಕನ್ನಡ ಬರೆಯಲು ಸಚಿವರು ಪರದಾಡಿದ ಪರಿ ಸ್ವಲ್ಪ ಜನ ಕಾಮಿಡಿಯಾಗಿ ತೆಗೆದುಕೊಂಡರೆ, ಇನ್ನಷ್ಟು ಮಂದಿ ಇದು ತಮಾಷೆ ವಿಚಾರವಲ್ಲ, ನಮ್ಮ ಭಾಷೆ ಅಳಿವು, ಉಳಿವಿನ ಪ್ರಶ್ನೆ ಎಂದು ಗಂಭೀರವಾಗಿ ಚಿಂತಿಸಿದ್ದಾರೆ.
ಕನ್ನಡ ಬರೆಯಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರೇ ಪರದಾಡಿದ ವಿಡಿಯೋ ಈಗ ವೈರಲ್ ಆಗುತ್ತಿದೆ. ಕೊಪ್ಪಳ ಜಿಲ್ಲೆಯ ಕಾರಟಗಿ ಪಟ್ಟಣದಲ್ಲಿ ಅಂಗನವಾಡಿ ಕೇಂದ್ರ ಉದ್ಘಾಟನೆಗೆ ಆಗಮಿಸಿದ್ದ ಸಚಿವ ಶಿವರಾಜ ತಂಗಡಗಿ ‘‘ಶುಭವಾಗಲಿ’’ ಎಂದು ಬೋರ್ಡ್ ಮೇಲೆ ಬರೆಯಲು ಮುಂದಾಗಿದ್ದಾರೆ. ಈ ವೇಳೆ, ಶುಭವಾಗಲಿ ಸರಿಯಾಗಿ ಬರೆಯಲಾಗದೇ ಸಚಿವ ತಂಗಡಗಿ ಯಡವಟ್ಟು ಮಾಡಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
ಸದ್ಯ ಕರ್ನಾಟಕದಲ್ಲಿ ಕನ್ನಡ ಭಾಷೆಯ ಉಳಿಸಿ ಬೆಳೆಸಬೇಕು ಅನ್ನೋ ಚರ್ಚೆ ಬಹುದೊಡ್ಡದಾಗಿಯೇ ನಡೀತಿದೆ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಿರಬೇಕೆಂದು ಚಿಂತನೆಯೂ ಎಲ್ಲರಲ್ಲೂ ಸ್ಥಿತಗೊಂಡಿದೆ.. ಈ ಚಿಂತೆನೆ, ಉಳಿವಿನ ಹೋರಾಟಗಳ ಮಧ್ಯೆ ಸ್ವತಃ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜವಾಬ್ದಾರಿ ಹೊತ್ತಿರುವ ಸಚಿವರಾದ ಶಿವರಾಜ್ ತಂಗಡಗಿ ಅವರು ಕನ್ನಡ ಬರೆಯೋಕೆ ಹೋಗಿ ಎಡವಟ್ಟು ಮಾಡ್ಕೊಂಡಿದ್ದು ಚರ್ಚೆ ಹುಟ್ಟು ಹಾಕಿದೆ.