ನೆನೆಗುದಿಗೆ ಬಿದ್ದಿರುವ ಯೋಜನೆಗಳಿಗೆ ಕಾಯಕಲ್ಪ

0
chandru lamani
Spread the love

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ಚುನಾವಣೆಯಲ್ಲಿ ಜನತೆ ನನ್ನ ಮೇಲೆ ವಿಶ್ವಾಸವಿಟ್ಟು ಶಾಸಕನನ್ನಾಗಿ ಆಯ್ಕೆ ಮಾಡಿದ್ದು, ಅವರ ಪ್ರೀತಿ-ವಿಶ್ವಾಸಕ್ಕೆ ಧಕ್ಕೆ ಬಾರದಂತೆ ಇಡೀ ಮತ ಕ್ಷೇತ್ರದಾದ್ಯಂತ ಅಭಿವೃದ್ಧಿ ಕೆಲಸಗಳನ್ನು ಮಾಡುವುದಕ್ಕೆ ಆದ್ಯತೆ ನೀಡುತ್ತೇನೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

Advertisement

ಅವರು ಶನಿವಾರ ಶಿರಹಟ್ಟಿ ಪಟ್ಟಣದಲ್ಲಿ 2023-24ನೇ ಸಾಲಿನ ಎಸ್‌ಎಫ್‌ಸಿ ಹಾಗೂ 15ನೇ ಹಣಕಾಸು, ಸ್ವಚ್ಛಭಾರತ ಮಿಷನ್-2.0 ಅಡಿಯಲ್ಲಿ ಮಂಜೂರಾಗಿದ್ದ 226 ಲಕ್ಷ ರೂ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಹಾಗೂ ತಾಲೂಕಿನ ಮಾಗಡಿ ಸರಕಾರಿ ಪದವಿಪೂರ್ವ ಕಾಲೇಜಿಗೆ 75 ಲಕ್ಷ ರೂ ವೆಚ್ಚದಲ್ಲಿ ಕೊಠಡಿಗಳ ನಿರ್ಮಾಣ ಮತ್ತು ವಿದ್ಯುದೀಕರಣಕ್ಕೆ ಚಾಲನೆ ನೀಡಿ ಮಾತನಾಡಿದರು.

ತಹಸೀಲ್ದಾರ ಅನಿಲ ಬಡಿಗೇರ, ಮುಖ್ಯಾಧಿಕಾರಿ ಸಿದ್ದರಾಯ ಕಟ್ಟಿಮನಿ, ನಾಗರಾಜ ಲಕ್ಕುಂಡಿ, ಪರಮೇಶ ಪರಬ, ಬಸವರಾಜ ಪಲ್ಲೇದ, ಸಂದೀಪ ಕಪ್ಪತ್ತನವರ, ಹೊನ್ನಪ್ಪ ಶಿರಹಟ್ಟಿ, ಅಶ್ರತಅಲಿ ಢಾಲಾಯತ, ನಂದಾ ಪಲ್ಲೇದ, ಬಸವರಾಜ ತುಳಿ, ಬಿ.ಬಿ. ಕಳಸಣ್ಣವರ, ರಮೇಶ ಉತ್ತಂಗಿ, ಇರ್ಷಾದ ಢಾಲಾಯತ, ಮುಸ್ತಾಕ ಚೋರಗಸ್ತಿ, ತಿಪ್ಪಣ್ಣ ಕೊಂಚಿಗೇರಿ, ಜಾನು ಲಮಾಣಿ, ಅಕ್ಬರಸಾಬ ಯಾದಗಿರಿ, ಅಶೋಕ ಪಲ್ಲೇದ, ವೀರಣ್ಣ ಅಂಗಡಿ, ವೀರಯ್ಯ ಮಠಪತಿ, ಚನ್ನಪ್ಪ ಕೋಡಿ, ಶೇಖಣ್ಣ ಬಡ್ನಿ, ವಾಯ್.ಡಿ. ಪಾಟೀಲ, ಡಿ.ಆರ್.ಕೆಂಚಕ್ಕನವರ, ಹನುಮಂತಪ್ಪ ವಡ್ಡರ, ಪಾಲಾಕ್ಷಿ ಈಳಗೇರ, ಗಿರಿಜಮ್ಮ ಹೆಳವರ, ಲಲಿತಾ ಪಾಟೀಲ, ಡಿ.ಕೆ. ಸಾಸಳ್ಳಿ, ಶಹನಾಜಬೇಗಂ ಬುವಾಜಿ, ಫಕ್ಕೀರೇಶ ಮ್ಯಾಗೇರಿ, ಎಸ್.ವೈ. ಕುಂಬಾರ, ಪಿಡಬ್ಲ್ಯೂಡಿ ಎಇಇ ಎಫ್.ಎಚ್. ತಿಮ್ಮಾಪೂರ ಮುಂತಾದವರು ಉಪಸ್ಥಿತರಿದ್ದರು.

ಮುಂಬರುವ ದಿನಗಳಲ್ಲಿ ಶಿರಹಟ್ಟಿ-ಲಕ್ಷ್ಮೇಶ್ವರ ಮತ್ತು ಮುಂಡರಗಿ ತಾಲೂಕುಗಳಲ್ಲಿ ಮೂಲಸೌಕರ್ಯವೂ ಸೇರಿದಂತೆ ಜನತೆಯ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ. ಈಗಾಗಲೇ ನೆನಗುದಿಗೆ ಬಿದ್ದಿರುವ ಯೋಜನೆಗಳಿಗೆ ಕಾಯಕಲ್ಪ ನೀಡಲಾಗುತ್ತಿದೆ. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕೆಂದು ಚಂದ್ರು ಲಮಾಣಿ ಕೋರಿದರು.

 


Spread the love

LEAVE A REPLY

Please enter your comment!
Please enter your name here