ಉತ್ತರ ಪ್ರದೇಶ:- ನಾನು ನಿನ್ನ ಗಂಡನ 2ನೇ ಹೆಂಡತಿ ಎಂದು ಯಾರೋ ಕರೆ ಮಾಡಿ ಹೇಳುತ್ತಿದ್ದಂತೆ ಆಘಾತಕ್ಕೊಳಗಾದ ಮಹಿಳೆ ಕುಸಿದು ಪ್ರಾಣಬಿಟ್ಟಿರುವ ಘಟನೆ ನವದೆಹಲಿಯಲ್ಲಿ ಜರುಗಿದೆ.
ರೀಟಾ ಮೃತ ಮಹಿಳೆ. ಮಹಿಳೆ ಘಟನೆ ನಡೆದ ಸಮಯದಲ್ಲಿ ತನ್ನ ತಾಯಿ ಮತ್ತು ಸಹೋದರನೊಂದಿಗೆ ದೆಹಲಿಯಲ್ಲಿ ವಾಸಿಸುತ್ತಿದ್ದರು. ರೀಟಾಗೆ ತನ್ನ ಪತಿಯ ಮೊಬೈಲ್ ಸಂಖ್ಯೆಯಿಂದ ಒಂದು ಕರೆ ಬಂದಿತ್ತು, ಮಹಿಳೆಯೊಬ್ಬಳು ಮಾತನಾಡಿ ಆಕೆಯನ್ನು ಆಕೆಯ ಗಂಡನ ಎರಡನೇ ಪತ್ನಿಯೆಂದು ಪರಿಚಯಿಸಿಕೊಂಡಿದ್ದಳು. ಈ ಕರೆಯು ರೀಟಾಗೆ ಭಾವನಾತ್ಮಕ ಯಾತನೆಯನ್ನುಂಟು ಮಾಡಿತ್ತು.
ಉತ್ತರ ಪ್ರದೇಶದ ಹಾರ್ದೋಯ್‌ನಲ್ಲಿರುವ ತನ್ನ ಮನೆಗೆ ಮರಳುವ ಉದ್ದೇಶದಿಂದ ಅವಳು ತಕ್ಷಣ ತನ್ನ ತಾಯಿ ಮತ್ತು ಸಹೋದರನೊಂದಿಗೆ ದೆಹಲಿಯಿಂದ ಬಸ್‌ನಲ್ಲಿ ಹೊರಟಳು. ಪ್ರಯಾಣದ ಸಮಯದಲ್ಲಿ ಆಕೆಗೆ ತುಂಬಾ ಸುಸ್ತಾದ ಅನುಭವವಾಗಿತ್ತು. ದುಃಖಿತಳಾಗಿದ್ದಳು, ತಾಯಿಯ ಮಡಿಲಲ್ಲಿ ಅಳುತ್ತಿದ್ದಳು, ಅವಳು ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಳು. ಬಳಿಕ ಅಲ್ಲೇ ಉಸಿರು ಚೆಲ್ಲಿದ್ದಳು. ಅಟರೌಲಿ ಪೊಲೀಸ್ ಠಾಣೆ ವ್ಯಾಪ್ತಿಯ ಧಿಕುನ್ನಿ ಗ್ರಾಮದ ಬಳಿ ಈ ಘಟನೆ ನಡೆದಿದೆ.