ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದೊಡ್ಡ ಘೋರ ದುರಂತ ಸಂಭವಿಸಿದೆ. ಬಣ್ಣ ಬೆರೆಸುವ ಪೇಂಟ್ ಮಿಕ್ಸರ್ ಗೆ ಮಹಿಳೆಯೊಬ್ಬರ ಜಡೆ ಸಿಲುಕಿಕೊಂಡು ಮಹಿಳೆಯ ತಲೆಯೇ ಕಟ್ ಆಗಿರುವ ಘಟನೆ ನಡೆದಿದೆ. ಬೆಂಗಳೂರಿನ ನೆಲಗದರನಹಳ್ಳಿಯಲ್ಲಿರುವ ಶ್ರೀಪೇಂಟ್ಸ್ ಕಾರ್ಖಾನೆಯಲ್ಲಿ ಬಣ್ಣ ಬೆರೆಸುವಾಗ ಈ ಅವಘಡ ಸಂಭವಿಸಿದೆ.
Advertisement
ಮಲ್ಲತ್ತಹಳ್ಳಿಯಲ್ಲಿ ವಾಸವಿದ್ದ 33 ವರ್ಷದ ಶ್ವೇತಾ ಮೃತ ಮಹಿಳೆ. ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಪೇಂಟ್ ಬೆರೆಸುವ ಗ್ರೈಂಡರ್ ಗೆ ಮಹಿಳೆಯ ಜಡೆ ಸಿಲುಕಿಕೊಂಡಿದೆ ಮಹಿಳೆ ಕೂಗಿಕೊಂಡರು ಅವರನ್ನು ರಕ್ಷಿಸಲು ಸಾಧ್ಯವಾಗಿಲ್ಲ, ನೋಡ ನೋಡುತ್ತಿದ್ದಂತೆಯೇ ಮಹಿಳೆಯ ತಲೆಯೇ ಗ್ರೈಂಡರ್ ಗೆ ಸಿಲುಕಿ ಕಟ್ ಆಗಿದೆ. ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.