ಅನಾಥನೊಬ್ಬನ ಕೈ ಹಿಡಿದ ಮಹಿಳೆಯೊಬ್ಬಳು ಅನುಮಾನಾಸ್ಪದ ಸಾವು!

0
Spread the love

ಕೋಲಾರ:- ತಾಲೂಕು ತೊಟ್ಲಿ ಗ್ರಾಮದಲ್ಲಿ ಮಹಿಳೆಯೋರ್ವರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಜರುಗಿದೆ.

Advertisement

24 ವರ್ಷದ ನಂದಿನಿ ಎಂಬ ಮಹಿಳೆ ಅನಾಥಾಶ್ರಮದಲ್ಲಿ ಬೆಳೆದು ಅನಾಥನನ್ನು ಮದುವೆಯಾಗಿದ್ಲು. ತೊಟ್ಲಿ ಮೂಲದ ಪತಿ ನಾಗೇಶ್ ಕಿರುಕುಳದಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ಕಳೆದ ರಾತ್ರಿ ಕುಡಿದು ಬಂದು ಪತಿ ಪತ್ನಿ ಇಬ್ಬರು ಗಲಾಟೆ ಮಾಡಿಕೊಂಡಿದ್ದು, ಈ ವೇಳೆ ನಾಗೇಶ್ ತನ್ನ ಪತ್ನಿ ನಂದಿನಿ ಕುತ್ತಿಗೆ ಹಿಸುಕಿ ಕೊಲೆ ಮಾಡಿರುವ ಅನುಮಾನವನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ.

ಇನ್ನೂ ಕೊಲೆ ಶಂಕೆ ವ್ಯಕ್ತವಾದ ಹಿನ್ನೆಲೆ ಕೋಲಾರ ಗ್ರಾಮಾಂತರ ಪೊಲೀಸರು ಪತಿ ನಾಗೇಶ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕೋಲಾರ ತಹಶೀಲ್ದಾರ್ ನಯನಾ ಸಮ್ಮುಖದಲ್ಲಿ ನಂದಿನಿ ಮರಣೋತ್ತರ ಪರೀಕ್ಷೆ ನಡೆದಿದ್ದು, ತನಿಖೆ ಮುಂದುವರಿದಿದೆ.


Spread the love

LEAVE A REPLY

Please enter your comment!
Please enter your name here