ವಿಜಯಸಾಕ್ಷಿ ಸುದ್ದಿ, ಮುಳಗುಂದ: ಮಹಿಳೆ ಎಲ್ಲಾ ಕ್ಷೇತ್ರದಲ್ಲಿ ಮುನ್ನುಗುತ್ತಾ ತನ್ನದೇ ಛಾಪು ಮೂಡಿಸಿದ್ದಾಳೆ. ಮಹಿಳೆ ಇಂದು ಅಬಲೆಯಲ್ಲ, ಎಲ್ಲಾ ರಂಗದಲ್ಲೂ ಸಬಲೆಯಾಗಿದ್ದಾಳೆ ಎಂದು ನಿವೃತ್ತ ಪ್ರಾಚಾರ್ಯರಾದ ಮುಕ್ತಾ ಉಡುಪಿ ಹೇಳಿದರು.
ಅವರು ಪಟ್ಟಣದ ಸರಕಾರಿ ಮಾದರಿ ಕನ್ನಡ ಗಂಡುಮಕ್ಕಳ ಶಾಲೆ ನಂ.1ರಲ್ಲಿ ಉನ್ನತಿ ಮಹಿಳಾ ಸಮಾಜ ಸೇವಾ ಹಾಗೂ ವಿವಿಧೋದ್ದೇಶಗಳ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಿಳೆಗೆ ಇಂದು ಎಲ್ಲಾ ರಂಗದಲ್ಲಿ ಪ್ರವೇಶೀಸುವ ಸ್ವಾತಂತ್ರ್ಯವಿದೆ. ಪುರುಷರಿಗೆ ಸರಿ ಸಮಾನವಾಗಿ ಕಾಯಕ ಮಾಡುವ ಶಕ್ತಿ ಹೊಂದಿದ್ದು, ಮಹಿಳೆಯರು ಪ್ರತೀ ಕುಟುಂಬದ ಆಧಾರಸ್ತಂಭವಾಗಿ ಕಾರ್ಯನಿರ್ವಣೆ ಮಾಡುತ್ತಿದ್ದಾಳೆ. ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಗೆ ಅಗ್ರ ಸ್ಥಾನವಿದೆ, ಮಹಿಳೆ ಒಂದು ಕುಟುಂಬದ ತಾಯಿಯಾಗಿ, ಮಗಳಾಗಿ, ಸೊಸೆಯಾಗಿ, ಪತ್ನಿಯಾಗಿ ಕಾರ್ಯನಿರ್ವಹಣೆ ಮಾಡುವವಳು ಎಂದರು.
ಅಧ್ಯಕ್ಷತೆ ಪ್ರೇಮಾ ಬಡ್ನಿ, ಸುನಂದಾ ನವಲೆ, ಹರ್ಷಾಲತಾ ದೇಶಪಾಂಡೆ, ಸುಮನ್ ಬಡ್ನಿ, ಗಂಗಮ್ಮಾ ಶಿರಮಾಪೂರ, ರೇಣುಕಾ ಜಾಧವ, ಮಾಹಾದೇವಿ ನೀಲಗುಂದ, ವಿಜಯಲಕ್ಷ್ಮಿ ನಿಂಗೋಜಿ, ಶಿಕ್ಷಕಿ ಶೋಭಾ ಪಾಟೀಲ್, ರಾಜೇಶ್ವರಿ ಬಡ್ನಿ ಹಾಗೂ ಉನ್ನತಿ ಮಹಿಳಾ ಸಂಘದ ಸರ್ವ ಸದಸ್ಯರು ಇದ್ದರು.