ಮಹಿಳೆ ಸಾಮಾಜಿಕವಾಗಿ ಪ್ರಗತಿಯಲ್ಲಿದ್ದಾಳೆ

0
rajani
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಆಧುನಿಕ ಸಮಾಜದಲ್ಲಿ ಮಹಿಳಾ ಯುವ ಪೀಳಿಗೆಯು ಸ್ವಾವಲಂಬಿಗಳಾಗಿ ಉತ್ತಮ ಆದಾಯ ಹೊಂದುವ ಮೂಲಕ ಮನೆಯ ಆರ್ಥಿಕ ಜವಾಬ್ದಾರಿಗಳನ್ನು ನಿರ್ವಹಿಸುತ್ತ, ಕುಟುಂಬದ ಏಳ್ಗೆಗಾಗಿ ಶ್ರಮಿಸುತ್ತಿರುವದರಿಂದ ಸಾಮಾಜಿಕವಾಗಿ ಮಹಿಳೆ ಪ್ರಗತಿಯ ಹಾದಿಯಲ್ಲಿದ್ದಾಳೆ ಎಂದು ಗದಗ-ಬೆಟಗೇರಿ ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ರಜನಿ ಪಾಟೀಲ ಹೇಳಿದರು.

Advertisement

ಅವರು ಗದಗ ಜಿಲ್ಲಾ ಅಕ್ಕಮಹಾದೇವಿಯ ಕದಳಿಶ್ರೀ ವೇದಿಕೆಯಿಂದ ಜರುಗಿದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಕವಿತಾ ದಂಡಿನ ಮಾತನಾಡಿ, ಸ್ತ್ರೀಯರನ್ನು ಶಕ್ತಿ ಸ್ವರೂಪಿಯಾಗಿ ಆರಾಧಿಸುವ ದೇಶ ನಮ್ಮದು. ಕತೃತ್ವ, ನೇತೃತ್ವ, ಮಾತೃತ್ವ ಈ ಮೂರು ಜವಾಬ್ದಾರಿಯೊಂದಿಗೆ ಸ್ತ್ರೀಯರು ಸಮಾಜದಲ್ಲಿ ಸುಂದರಮಯವಾಗಿ ಬದುಕನ್ನು ರೂಪಿಸಿಕೊಂಡಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಜ್ಯೋತಿ ಭರಮಗೌಡರ ಮಾತನಾಡಿ, ಸ್ತ್ರೀಯರು ಅಕ್ಷರಸ್ಥರಾದರೆ ಸುಸಜ್ಜಿತ ನಾಗರಿಕ ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಾಳೆ ಎಂದರು. ಸುಮಾ ಪಾಟೀಲ, ಪ್ರಿಯಾಂಕ ಹಳ್ಳಿ ವಚನ ಪ್ರಾರ್ಥನೆಗೈದರು, ಹೇಮಾ ಪೊಂಗಾಲಿಯಾ ಸ್ವಾಗತಿಸಿದರು. ಸಾಗರಿಕ ಅಕ್ಕಿ ಪರಿಚಯಿಸಿದರು. ಸವಿತಾ ಸಿಂತ್ರಿ ನಿರೂಪಿಸಿದರು. ಶ್ವೇತಾ ಬಿಕ್ಷಾವತಿಮಠ ವಂದಿಸಿದರು.

ಕಾರ್ಯಕ್ರಮದಲ್ಲಿ ಮಂಜುಳಾ ಹಲಗತ್ತಿ, ಮೀನಾಕ್ಷಿ ಕೊರವನವರ, ರೇಖಾ ರೊಟ್ಟಿ, ಅಶ್ವಿನಿ ಮಾದಗುಂಡಿ, ಅನುರಾಧಾ ಅಮಾತ್ಯೆಗೌಡರ, ಸುನಂದ ಡಿಂಪಲಿ, ಅನುರಾಧಾ ಬಸವಾ, ಸುಧಾ ಬಂಡಾ, ವಿನೂತಾ ಜಲಗೇರಿ, ಸಂಪದ ಶಿಶುನಾಳ, ಗಿರಿಜಾ ನಿಡಗುಂದಿ, ರೇಖಾ ಜಿಗಜಿನ್ನಿ, ವಂದನಾ ಪತ್ತಾರ, ಅಶ್ವಿನಿ ಪಾಟೀಲ, ಮಹಾನಂದಾ ಕಾತರಕಿ, ಸೀತಾ ಚಿಟಗುಪ್ಪಿ ಮುಂತಾದವರಿದ್ದರು.


Spread the love

LEAVE A REPLY

Please enter your comment!
Please enter your name here