ಬೆಳಗಾವಿ: ಮಹಿಳೆಯರಿಗೆ ಸಹಾಯವಾಗಲೆಂದು ರಾಜ್ಯ ಸರ್ಕಾರ ಆರಂಭಿಸಿದ ಗೃಹಲಕ್ಷ್ಮಿ ಯೋಜನೆಯ ಹಣ ಸಾವಿರಾರು ಮಹಿಳೆಯರಿಗೆ ಸಹಾಯಕವಾಗಿದೆ. ಕೆಲ ಕಡೆ ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ ಎಂಬ ಬಗ್ಗೆ ಗೊಂದಲಗಳು ನಡೆಯುತ್ತಿದ್ದು ಮತ್ತೊಂದಷ್ಟು ಕಡೆ ಮಹಿಳೆಯರು ಸರ್ಕಾರದ ಯೋಜನೆಯನ್ನು ಕೊಂಡಾಡಿರುವ ಉದಾಹರಣೆಗಳು ಸಿಗುತ್ತವೆ.
ಸದ್ಯ ಇಲ್ಲೊಬ್ಬ ಮಹಿಳೆಯೊಬ್ಬರು ಖಾರ ಪುಡಿ ಮಾಡುವ ಯಂತ್ರ ಖರಿದೀಸಿದ್ದಾರೆ. ಬೆಳಗಾವಿ ತಾಲೂಕಿನ ಕುಕಡೊಳ್ಳಿ ಗ್ರಾಮದ ತಾಯವ್ವ ಲಕಮೋಜಿ ಖದೀಸಿದ ಯಂತ್ರವನ್ನು, ಆಕೆಯ ಕಿರು ಉದ್ದಿಮೆಯನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಉದ್ಘಾಟನೆ ಮಾಡಿದ್ದಾರೆ.
ಗೃಹ ಲಕ್ಷ್ಮಿ ಹಣದಲ್ಲಿ ಅನೇಕ ಮಹಿಳೆಯರು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ ಎಂದು ಸಚಿವೆ ಸಂತಸ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಗೃಹ ಲಕ್ಷ್ಮಿ ಹಣದಲ್ಲಿ ಮಹಿಳೆಯೊಬ್ಬರು ಫ್ರಿಡ್ಜ್ ಖರೀದಿಸಿದ್ದು ಸುದ್ದಿಯಾಗಿತ್ತು. ಯೋಜನೆಯಡಿ ಬಂದ ಹಣದ ಸಹಾಯದಿಂದ ಮಹಿಳೆಯೊಬ್ಬರು ಮಗನಿಗೆ ದ್ವಿಚಕ್ರ ವಾಹನ ಖರೀದಿಸಿ ಕೊಟ್ಟಿದ್ದೂ ಸುದ್ದಿಯಾಗಿತ್ತು.