ಇನ್ಸ್ಟಾ ಗೆಳೆಯನನ್ನು ನೋಡಲು ಬಂದವಳು ಹೆಣವಾದಳು.. ಜೋಳದಕಡ್ಡಿ ಮೆದೆಯಲ್ಲಿ ಗೃಹಿಣಿ ಶವ ಮರೆಮಾಚಿ ಎಸ್ಕೇಪ್ ಆಗಿದ್ದ ಹಂತಕ ಅರೆಸ್ಟ್!

0
Spread the love

ಮಂಡ್ಯ:- ಇನ್ಸ್ಟಾಗ್ರಾಮ್ ನಲ್ಲಿ ಪರಿಚಯವಾಗಿದ್ದ ಗೃಹಿಣಿಯನ್ನು ಕೊಲೆಗೈದು ಶವವನ್ನು ಜೋಳದಕಡ್ಡಿಯ ಮೆದೆಯಲ್ಲಿ ಮುಚ್ಚಿಟ್ಟಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಹಾಸನದ ಹೊಸಕೊಪ್ಪಲು ಗ್ರಾಮದ ಪ್ರೀತಿ (35) ಕೊಲೆಯಾದ ಗೃಹಿಣಿ. ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಕರೋಟಿ ಗ್ರಾಮದಲ್ಲಿ ಭಾನುವಾರ ಘಟನೆ ಜರುಗಿದೆ.

Advertisement

ಹಾಸನದ ಹೊಸಕೊಪ್ಪಲು ಗ್ರಾಮದ ಪ್ರೀತಿ (35) ಕೊಲೆಯಾದ ಗೃಹಿಣಿ. ಕೆ. ಆರ್ ಪೇಟೆ ತಾಲ್ಲೂಕಿನ ಕರೋಟಿ ಗ್ರಾಮದ ಪುನೀತ್ (28)ಕೊಲೆ ಆರೋಪಿ. ಪುನೀತ್ ಹಾಗೂ ಪ್ರೀತಿ ಇವರಿಬ್ಬರಿಗೂ ಕಳೆದ 10 ದಿನಗಳ ಹಿಂದಷ್ಟೇ ಇನ್ಸ್ಟಾಗ್ರಾಮ್ ನಲ್ಲಿ ಪರಿಚಯವಾಗಿತ್ತು. ಭಾನುವಾರ ಗೃಹಿಣಿ ಜೊತೆ ಮೈಸೂರು, ಕೆ.ಆರ್.ಎಸ್ ನಲ್ಲಿ ಸುತ್ತಾಡಿದ್ದಾನೆ. ಬಳಿಕ ಕತ್ತರಘಟ್ಟ ಅರಣ್ಯ ಪ್ರದೇಶದಲ್ಲಿ ಗೃಹಿಣಿಯನ್ನು ಹತ್ಯೆ ಮಾಡಿ ಮೆದೆಯಲ್ಲಿ ಶವ ಮುಚ್ಚಿಟ್ಟಿದ್ದಾನೆ.

ಇತ್ತ ಹೆಂಡತಿ ಕಾಣಿಸದೇ ಕಂಗಾಲಾಗಿದ್ದ ಗಂಡ, ಸುಂದರೇಶ್ ಹಾಸನ ಪೋಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ. ಬಳಿಕ ತನಿಖೆ ಕೈಗೊಂಡ ಪೊಲೀಸರು, ಮೊಬೈಲ್ ನಂಬರ್ ಮೂಲಕ ಆರೋಪಿ ಪತ್ತೆ ಹಚ್ಚಿದ್ದಾರೆ. ಸ್ಥಳಕ್ಕೆ ಹಾಸನ ಹಾಗೂ ಕಿಕ್ಕೇರಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ. ಗೃಹಿಣಿ ಮೈ ಮೇಲಿದ್ದ ಚಿನ್ನಕ್ಕಾಗಿ ಆರೋಪಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here