ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನ ಕೊಡಿಗೇಹಳ್ಳಿ ಠಾಣಾ ವ್ಯಾಪ್ತಿಯ ಸಹಕಾರ ನಗರದಲ್ಲಿ ರಸ್ತೇಲಿ ನಡೆದುಕೊಂಡು ಹೋಗ್ತಿದ್ದ ಮಹಿಳೆ ಮೇಲೆ ದೊಡ್ಡ ಕಲ್ಲು ಎತ್ತಿಹಾಕಿ ಏಕಾ ಏಕಿ ಮಾರಣಾಂತಿಕ ಹಲ್ಲೆ ನಡೆದಿರುವ ಘಟನೆ ಜರುಗಿದೆ.
ಸುನೀತಾ (42) ಎಂಬ ಮಹಿಳೆ ಮೇಲೆ ಹಲ್ಲೆ ನಡೆದಿದ್ದು, ಇಬ್ಬರು ಮಕ್ಕಳ ಜೊತೆ ಬೆಂಗಳೂರಿನಲ್ಲಿ ಸುನೀತಾ ವಾಸವಿದ್ದರು ಎನ್ನಲಾಗಿದೆ.
ಸುನೀತಾ ಗಂಡ ದುಬೈನಲ್ಲಿ ಕೆಲಸ ಮಾಡ್ತಿದ್ದು, ಸಂಜೆ 6ಗಂಟೆ ಸುಮಾರಿಗೆ ಸಹಕಾರ ನಗರದ ಬಳಿ ಮಹಿಳೆ ಹೋಗ್ತಿದ್ದಳು. ಈ ವೇಳೆ ಏಕಾ ಏಕಿ ಕಲ್ಲಿನಿಂದ ಮಹಿಳೆ ಮೇಲೆ ಹಲ್ಲೆ ನಡೆದಿದೆ.
ಗಂಭೀರವಾಗಿ ಮಹಿಳೆ ತಲೆಗೆ ಆರೋಪಿ ಜಜ್ಜಿದ್ದಾನೆ. ಈ ವೇಳೆ ಸ್ಥಳೀಯರಿಂದ ಹಿಡಿದು ಆರೋಪಿಗೆ ಥಳಿಸಲಾಗಿದೆ. ಥಳಿಸಿ ಪೊಲೀಸರಿಗೆ ಸ್ಥಳೀಯರು ಒಪ್ಪಿಸಿದ್ದಾರೆ. ಸದ್ಯ ಘಟನೆ ಬಗ್ಗೆ ಆರೋಪಿ ಏನೂ ಬಾಯ್ಬಿಟ್ಟಿಲ್ಲ.
ಸದ್ಯ ಆರೋಪಿಯನ್ನ ವಶಪಡೆದು ಕೊಡೀಗೇಹಳ್ಳಿ ಪೊಲೀಸರು. ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.