ಗದಗ: ಸುಮಾರ 40 ವರ್ಷದ ಮಹಿಳೆ ಶವ ಭೀಷ್ಮ ಕೆರೆಯಲ್ಲಿ ಪತ್ತೆಯಾಗಿದೆ.
ಮುಂಜಾನೆಯೇ ಭೀಷ್ಮ ಕೆರೆಯಲ್ಲಿ ಶವ ತೇಲಾಡುತ್ತಿರುವುದನ್ನು ಕಂಡು ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ 112 ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಶವ ಹೊರಗಡೆ ತೆಗೆದಿದ್ದಾರೆ.
ಮಹಿಳೆ ಅನಾರೋಗ್ಯದಿಂದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಕೈಗೆ ಸಲಾಯಿನ್ (ನೀಡಲ್ಸ್) ಹಾಕಿರುವ ಪಟ್ಟಿ ಇರೋದರಿಂದ ಪೊಲೀಸರು ಈ ಶಂಕೆ ವ್ಯಕ್ತಪಡಿಸಿದ್ದಾರೆ.
ಮಹಿಳೆ ಯಾರು ಅನ್ನೋದು ಪತ್ತೆಯಾಗಿಲ್ಲ. ಹೀಗಾಗಿ ಶಹರ ಠಾಣೆಯ ಪೊಲೀಸರು ಮಹಿಳೆಯ ವಾರಸುದಾರರ ಪತ್ತೆ ಹಚ್ಚಲು ಮುಂದಾಗಿದ್ದಾರೆ.
ಕೆರೆಗೆ ರಕ್ಷಣೆ ಇಲ್ಲದೆ ಇರುವುದರಿಂದ ಇಂತಹ ಪ್ರಕರಣ ಪದೇ ಪದೇ ನಡೆತಾ ಇವೆ.
ಕೆರೆಗೆ ಬೇಲಿ ಹಾಕುವಂತೆ ಜನರು ಈ ಹಿಂದೆ ಹಲವಾರು ಬಾರಿ ಒತ್ತಾಯ ಮಾಡಿದ್ದರು. ಆದರೆ ಇದುವರೆಗೂ ಆ ಕೆಲಸ ಆಗಿಲ್ಲ ಎಂಬ ಆರೋಪ ಜನರದ್ದು,
ಗದಗ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.



