ವಿಜಯನಗರ:- ಯುವಕ-ಯುವತಿ ಇಬ್ಬರು ಒಂದೆ ಹಗ್ಗದಲ್ಲಿ ನೇಣಿಗೆ ಶರಣಾಗಿರುವ ಘಟನೆ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕು ಸುಕ್ಷೇತ್ರ ಮೈಲಾರ ತೀರದಲ್ಲಿ ಜರುಗಿದೆ. ಇನ್ನೂ ಇವರಿಬ್ಬರು ಯಾವ ಊರಿನವರು ಎಂದು ತಿಳಿದು ಬಂದಿಲ್ಲ.
Advertisement
ಮೃತ ದುರ್ದೈವಿಗಳು, ನಿನ್ನೆ ಮೈಲಾರ ಲಿಂಗೇಶ್ವರ ದೇವಸ್ಥಾನಕ್ಕೆ ಬೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ಯುವಕನ ಶರ್ಟಿನಲ್ಲಿ ದೇವರ ದರ್ಶನದ ಸಾಮಾನ್ಯ ದರ್ಶನದ ಚೀಟಿ ಸಿಕ್ಕಿದೆ. ಇವರಿಬ್ಬರೂ ನಿನ್ನೆ ಬೆಳಿಗ್ಗೆಯಿಂದ ಸಂಜೆವರೆಗೆ ಗ್ರಾಮದಲ್ಲಿ ಹಾಗೂ ನದಿ ತೀರದಲ್ಲಿ ಓಡಾಡಿದ್ದಾರೆ ಎನ್ನಲಾಗಿದೆ.
ಸದ್ಯ ಹುಡುಗನ ಮೊಬೈಲ್ ಪತ್ತೆಯಾಗಿದ್ದು ಸ್ವಿಚ್ ಆಫ್ ಆಗಿದೆ. ರಾತ್ರಿಯೆಲ್ಲ ಮಳೆ ಬಂದಿರೋ ಕಾರಣ ಫೋನ್ ಮಳೆಯಲ್ಲಿ ನೆನೆದಿದೆ ಹಾಗಾಗಿ ಆನ್ ಆಗುತ್ತಿಲ್ಲ. ಸ್ಥಳಕ್ಕೆ ಹೊಳಲು ಉಪ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.