ಹಾಸನ:- ಹಾಸನ ನಗರದ ಬಸಟ್ಟಿಕೊಪ್ಪಲಿನಲ್ಲಿ ಹೋಟೆಲ್‌ನಲ್ಲಿ ಊಟ ಮಾಡಿ ಕೈತೊಳೆಯುವಾಗ ಕುಸಿದು ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ಜರುಗಿದೆ.
Advertisement
26 ವರ್ಷದ ಬಾಲರಾಜ್ ಬಹದ್ದೂರ್ ಮೃತ ಯುವಕ. ಹಾಸನದ ಖಾಸಗಿ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಬಾಲರಾಜ್ ಮಂಗಳವಾರ ರಾತ್ರಿ ಸ್ನೇಹಿತರೊಂದಿಗೆ ಹೋಟೆಲ್‌ನಲ್ಲಿ ನಾನ್‌ವೆಜ್ ಊಟ ಮಾಡಿದ್ದ. ಊಟ ಮಾಡಿ ಕೈತೊಳೆಯುವಾಗ ವಾಂತಿ ಮಾಡಿಕೊಂಡು ಕುಸಿದು ಬಿದ್ದು ಹಠಾತ್ ಸಾವನ್ನಪ್ಪಿದ್ದಾನೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.