ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಘೋರ ದುರಂತ ಸಂಭವಿಸಿದ್ದು, ಪ್ರೀತಿ ನಿರಾಕರಿಸಿದ್ದಕ್ಕೆ ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಯಲಹಂಕ ನ್ಯೂಟೌನ್ನಲ್ಲಿ ನಡೆದಿದೆ. ಅಭಿಷೇಕ್ (23) ಆತ್ಮಹತ್ಯೆಗೆ ಶರಣಾದ ಯುವಕನಾಗಿದ್ದು, ಆತ್ಮಹತ್ಯೆಗೂ ಮುನ್ನ ಬರೆದಿಟ್ಟು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ನನ್ನ ಜೊತೆ ಇದ್ದವಳು, ಅವಳಿಗೀಗ ಏನಾಯಿತೆಂದು ನನಗೆ ತಿಳಿಯುತ್ತಿಲ್ಲ. ನನ್ನ ಜೀವನ ಪ್ರೀತಿಯಿಂದಲೇ ತುಂಬಿ ತುಳುಕುತ್ತಿತ್ತು. ಈಗ ಆ ಪ್ರೀತಿಯೇ ಅಂತ್ಯವಾಗಿದೆ. ಆದ್ದರಿಂದ ನಾನು ನನ್ನ ಜೀವನವನ್ನು ಕೊನೆಗೊಳಿಸುತ್ತಿದ್ದೇನೆ. ಎಲ್ಲರಿಗೂ ಹೇಳುತ್ತಿದ್ದೇನೆ ದಯವಿಟ್ಟು ಯಾರನ್ನೂ ಪ್ರೀತಿಸಬೇಡಿ.
ಈಗಿನ ಕಾಲದಲ್ಲಿ ಎಲ್ಲರೂ ವಂಚಕರೇ. ನನ್ನ ಎಲ್ಲಾ ಸ್ನೇಹಿತರಿಗೆ ಗುಡ್ ಬೈ. ಆ ಪ್ರೀತಿಯ ಕಾರಣದಿಂದ ನಿಮಗೆಲ್ಲರಿಗೂ ಸಮಯ ನೀಡಲು ಸಾಧ್ಯವಾಗಲಿಲ್ಲ. ಎಲ್ಲರೂ ನನ್ನನ್ನು ಪ್ರೀತಿಸುವುದರ ಜೊತೆಗೆ ನನ್ನೊಂದಿಗೆ ಸಂತೋಷವಾಗಿದ್ದರು. ಆದರೆ ನಾನು ನಿಮಗ್ಯಾರಿಗೂ ಸಮಯ ನೀಡಲು ಸಾಧ್ಯವಾಗಲಿಲ್ಲ. ನನ್ನನ್ನು ಕ್ಷಮಿಸಿ ಎಂದು ಬರೆದುಕೊಂಡಿದ್ದಾನೆ. ಸದ್ಯ ಘಟನೆ ಸಂಬಂಧ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.



