ತುಮಕೂರು: ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಹೋಗಿ ರೈಲಿನಡಿ ಸಿಲುಕಿ ಯುವಕ ಸಾವನ್ನಪ್ಪಿರುವ ಘಟನೆ ತುಮಕೂರಿನ ರೈಲ್ವೆ ನಿಲ್ದಾಣದ ಫ್ಲಾಟ್ ಫಾರಂ 4 ರಲ್ಲಿ ನಡೆದಿದೆ. ಛಾಯಾಂಕ್ (24) ಮೃತ ದುರ್ಧೈವಿಯಾಗಿದ್ದು, ಸೋಮವಾರ ಬೆಳಗ್ಗೆ ಯುವಕ ಪುಷ್ಪುಲ್ ಟ್ರೈನ್‌ಗೆ ಬಂದಿದ್ದ.
Advertisement
ಈ ವೇಳೆ ರೈಲು ನಿಲ್ಲುವ ಮೊದಲು ಇಳಿಯಲು ಹೋಗಿ ಬ್ಯಾಗ್ ರೈಲಿನ ಹ್ಯಾಂಡಲ್‌ಗೆ ಸಿಲುಕಿ ಈ ಅವಘಡ ಸಂಭವಿಸಿದೆ. ಯುವಕನ ದೇಹ ಅರ್ಧ ಭಾಗ ಸಂಪೂರ್ಣ ತುಂಡಾಗಿತ್ತು. ರೈಲ್ವೆ ನಿಯಮದ ಪ್ರಕಾರ ಸಾರ್ವಜನಿಕರು ಮುಟ್ಟುವ ಹಾಗಿಲ್ಲ,
ಹಾಗಾಗಿ ಯಾರೂ ಸಹಾಯಕ್ಕೆ ಬಂದಿರಲಿಲ್ಲ. ಈ ವೇಳೆ ಯುವಕ ತಮ್ಮವರಿಗೆ ಕರೆ ಮಾಡಲು ಫೋನ್ ಹುಡುಕಾಡುತ್ತಿದ್ದ. ಆದರೆ 25 ನಿಮಿಷ ಕಳೆದರೂ ಗಾಯಾಳುವನ್ನು ಆಸ್ಪತ್ರೆ ಸಾಗಿಸದೆ, ಪೊಲೀಸರು ವಿಳಾಸ ಪತ್ತೆ ಮಾಡಲು ಕಾಲಹರಣ ಮಾಡಿದ್ದಾರೆ. ಕೊನೆಗೆ ಪೊಲೀಸರು ಸ್ಥಳಕ್ಕೆ ಬಾರದೆ ಯುವಕ ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ.