ಗಣೇಶ ವಿಸರ್ಜನೆ ವೇಳೆ ವಿದ್ಯುತ್ ಶಾಕ್ ಹೊಡೆದು ಯುವಕ ಸಾವು: ಇಬ್ಬರು ಗಂಭೀರ!

0
Spread the love

ವಿಜಯಪುರ:- ನಗರದ ಗಾಂಧಿಚೌಕ್ ವೃತ್ತದ ಟಾಂಗಾ ಸ್ಟ್ಯಾಂಡ್ ಬಳಿ ಗಣೇಶ ವಿಸರ್ಜನೆ ವೇಳೆ ವಿದ್ಯುತ್ ಪ್ರವಹಿಸಿ ಓರ್ವ ಯುವಕ ಮೃತಪಟ್ಟಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿರುವ ಘಟನೆ ಜರುಗಿದೆ.

Advertisement

ಶುಭಂ ಸಂಕಳ (21) ಮೃತ ದುರ್ದೈವಿ. ಗಾಯಗೊಂಡವರನ್ನು ಡಿಜೆ ಯುವಕ ಪ್ರಭಾಕರ್ ಜಂಗಲೆ (22), ಡೋಬಲೆ ಗಲ್ಲಿಯ ಲಖನ್ ಶ್ರೀಕಾಂತ್ ಚವ್ಹಾಣ್ (28) ಎಂದು ಗುರುತಿಸಲಾಗಿದೆ.

7ನೇ ದಿನ ಗಣೇಶನ ವಿಸರ್ಜನೆಗೆ ಮೂರ್ತಿಯನ್ನು ಸಾಗಿಸುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಗಣೇಶ ಮೆರವಣಿಗೆ ವೇಳೆ ಯುವಕರು ಡಿಜೆ ಬಾಕ್ಸ್ ಮೇಲೆ ಕುಳಿತು ಕೋಲಿನಿಂದ ವಿದ್ಯುತ್ ತಂತಿಯನ್ನು ಎತ್ತಿದ್ದರು. ಈ ವೇಳೆ ವಿದ್ಯುತ್ ಪ್ರವಹಿಸಿ ಶುಭಂ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇನ್ನುಳಿದ ಇಬ್ಬರು ಯುವಕರ ಸ್ಥಿತಿ ಚಿಂತಾಜನಕವಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


Spread the love

LEAVE A REPLY

Please enter your comment!
Please enter your name here