ಬಿಸಿಲಿನ ಝಳದಿಂದ ದುಬೈನಲ್ಲಿ ಕರ್ನಾಟಕದ ಯುವಕ ಸಾವು!

0
Spread the love

ಉಡುಪಿ:– ಬಿಸಿಲಿನ ಝಳ ತಾಳಲಾರದೇ ಕುಂದಾಪುರದ ಮೂಲದ ಯುವಕ ದುಬೈನಲ್ಲಿ ಸಾವನ್ನಪ್ಪಿದ ಘಟನೆ ಜರುಗಿದೆ.

Advertisement

19 ವರ್ಷದ ಯುವಕ ಶಾನ್‌ ಡಿಸೋಜಾ ಮೃತ ದುರ್ದೈವಿ ಎನ್ನಲಾಗಿದೆ. ದುಬೈಯಿಂದ ಸುಮಾರು 115 ಕಿ.ಮೀ. ದೂರದಲ್ಲಿರುವ ರಾಸ್‌ ಅಲ್‌ ಖೈಮಾದ ಸೈಂಟ್‌ ಮೆರೀಸ್‌ ಚರ್ಚ್‌ ಬಳಿ ಮನೆಯಲ್ಲಿ ವಾಸವಾಗಿದ್ದರು.

ಖಾಸಗಿ ಕಂಪೆನಿಯಲ್ಲಿ ಮ್ಯಾನೆಜರ್‌ ಆಗಿದ್ದ ಶಾನ್, ಅಲ್ಲಿಯೇ ಕಾಲೇಜು ವಿದ್ಯಾಭ್ಯಾಸ ಮಾಡುತ್ತಿದ್ದರು. ಬಿಸಿಲಿನ ತಾಪ ಮೂರ್ಚೆ ಹೋಗಿ ಆರ್‌ಎಕೆ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ರವಿವಾರ ಮೃತರಾಗಿದ್ದಾರೆ.

ಯುವಕ ಶಾನ್‌ ಡಿಸೋಜಾ ಅವರಿಗೆ ತಂದೆ, ತಾಯಿ ಮತ್ತು ಇಬ್ಬರು ಸಹೋದರರು ಇದ್ದಾರೆ ಎಂದು ತಿಳಿದು ಬಂದಿದೆ.


Spread the love

LEAVE A REPLY

Please enter your comment!
Please enter your name here