ಕಾರವಾರ:- ಕಾರವಾರ ತಾಲೂಕಿನ ಸುಂಕೇರಿ ಬಳಿಯ ಕಾಳಿ ನದಿಯಲ್ಲಿ ಮೀನು ಹಿಡಿಯಲು ಹೋದ ಯುವಕನೋರ್ವ ನಾಪತ್ತೆಯಾದ ಘಟನೆ ಜರುಗಿದೆ.
Advertisement
ಸಂತೋಷ್ ರಾಯ್ಕರ್ (35) ಕಾಳಿ ನದಿಯಲ್ಲಿ ನಾಪತ್ತೆಯಾದ ಯುವಕ. ಶನಿವಾರ ರಾತ್ರಿ ಸುಂಕೇರಿ ಸೇತುವೆ ಬಳಿ ಮೀನು ಹಿಡಿಯಲು ಹೋಗಿ ಕಾಲುಜಾರಿ ಬಿದ್ದಿದ್ದ ಸಂತೋಷ್ ಕೊಚ್ಚಿಹೋಗಿದ್ದಾನೆ. ಅಗ್ನಿಶಾಮಕ ದಳ ಮತ್ತು ಪೊಲೀಸರು ನದಿ ಹಿನ್ನೀರಿನಲ್ಲಿ ಸಂತೋಷ್ ಶವಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಕಾರವಾರ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.