ಬೆಳಗಾವಿ: ಹಾಡು ಹಗಲೇ ಯುವಕನೊರ್ವನ ಬರ್ಬರ ಹತ್ಯೆಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುರಗೋಡ ಗ್ರಾಮದ ಹೊರ ವಲಯದಲ್ಲಿ ನಡೆದಿದೆ. ಸೋಹಿಲ್ ಅಹ್ಮದ್ ಕಿತ್ತೂರು (17) ಮೃತ ಯುವಕನಾಗಿದ್ದು, ಯುವಕ ಗ್ರಾಮದಲ್ಲಿ ಎಗ್ ರೈಸ್ ಅಂಗಡಿ ಇಟ್ಟುಕೊಂಡಿದ್ದನು. ಮುರುಗೋಡು ಹೊರ ವಲಯದಲ್ಲಿ ಚಾಕುವಿನಿಂದ ಎಲ್ಲೆಂದರಲ್ಲಿ ಇರಿದು ಕೊಲೆ ಮಾಡಲಾಗಿದ್ದು,
ಐವರು ಯುವಕರನಿಂದ ಕೊಲೆ ಮಾಡಿರೋ ಶಂಕೆಯಾಗಿದೆ. ಈ ಹಿಂದೆಯೂ ಕೂಡ ಯುವಕರಿಂದ ಮೃತನಿಗೆ ಕೊಲೆ ಬೆದರಿಕೆ ಬಂದಿದ್ದರ ಬಗ್ಗೆ ಮಾಹಿತಿ ತಿಳಿದು ಬಂದಿದ್ದು, ಕೊಲೆ ವಿಚಾರ ಗೊತ್ತಾಗುತ್ತಿದ್ದಂತೆ ಸ್ಥಳದಲ್ಲಿ ನೂರಾರು ಜನರು ಜಮಾವಣೆಗೊಂಡಿದ್ದರು. ಸ್ಥಳಕ್ಕೆ ಮುರಗೋಡು ಪೊಲೀಸರು ಹಾಗೂ ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.



