ಕಲಬುರಗಿ: ಕಣ್ತುಂಬ ಕನಸು, ಜೀವನದ ಬಗ್ಗೆ ನೂರೆಂಟು ಆಸೆ. ಬದುಕಿ ಬಾಳಬೇಕಿದ್ದ ಜೀವ, ಕುಟುಂಬಕ್ಕೆ ಆಸರೆಯಾಗಬೇಕಿದ್ದವ ಇಂದು ಮಸಣ ಸೇರಿದ್ದಾನೆ. ಜೇವರ್ಗಿ ತಾಲೂಕಿನ ಅಂಕಲಗಿ ಗ್ರಾಮದ ಶರಣಬಸಪ್ಪ (24) ಹೊಟ್ಟೆ ನೋವು, ವಾಂತಿ ಎಂದು ಗುಲ್ಬರ್ಗಾ ಹಾರ್ಟ್ ಫೌಂಡೇಶನ್ ಆಸ್ಪತ್ರೆಗೆ ಸೇರಿದ್ದಾನೆ.
ಎರಡು ದಿನಗಳಿಂದ ಡಾಕ್ಟರ್ಸ್ ಸರಿಯಾಗಿ ಚಿಕಿತ್ಸೆ ನೀಡಲಿಲ್ಲ. ಹೀಗಾಗಿ ಬೇರೆ ಆಸ್ಪತ್ರೆಗೆ ಯುವಕನನ್ನು ಕರೆದುಕೊಂಡು ಹೋಗಿ ದಾಖಲು ಮಾಡುತ್ತೇವೆ ಎಂದು ಹೇಳಿದರೂ ವೈದ್ಯರು ಬಿಡಲಿಲ್ಲ. ಇದರಿಂದಾಗಿ ಆಸ್ಪತ್ರೆಯಲ್ಲಿದ್ದರೂ ಸರಿಯಾಗಿ ಚಿಕಿತ್ಸೆ ನೀಡದೆ ವೈದ್ಯರು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.



