ಗದಗ: ಇಂದು ನಡೆದ ಶಿವಾಜಿ ಜಯಂತಿ ಮೆರವಣಿಗೆಯಲ್ಲಿ ಗಲಾಟೆ ಮಾಡುತಿದ್ದ ಯುವಕನಿಗೆ ಧರ್ಮದೇಟು ನೀಡಿ ಪೋಲಿಸರಿಗೆ ಒಪ್ಪಿಸಿರುವ ಘಟನೆ ಗದಗ ನಗರದ ಬಸವೇಶ್ವರ ಸರ್ಕಲ್ ಬಳಿ ನಡೆದಿದೆ.
Advertisement
ಮೈಲಾರಿ ಎಂಬ ಯುವಕನಿಂದ ಗಲಾಟೆ ನಡೆದಿದ್ದು, ಇಂದು ಶಿವಾಜಿ ಜಯಂತಿ ಹಿನ್ನೆಲೆಯಲ್ಲಿ ರಾಚೂಟೇಶ್ವರ ದೇವಸ್ಥಾನದಿಂದ ಆರಂಭವಾಗಿದ್ದ ಮೆರವಣಿಗೆಯು ಬಸವೇಶ್ವರ ಸರ್ಕಲ್ ಬಳಿ ಬಂದಿತ್ತು.
ಇದನ್ನೂ ಓದಿ 26ಲಕ್ಷ ರೂ. ಹಣ ಸೀಜ್ ಕೇಸ್: ಮನನೊಂದ ಸಂಗಮೇಶ ಆತ್ಮಹತ್ಯೆಗೆ ಯತ್ನ!
ಈ ವೇಳೆ ಕುಡಿದ ಮತ್ತಿನಲ್ಲಿದ್ದ ಯುವಕನು ಡಿಜೆ ಮೆರವಣಿಗೆ ಮಧ್ಯೆ ಗಲಾಟೆ ಮಾಡುತ್ತಿದ್ದನು.
ಯುವಕನ ಕಿರಿಕಿರಿಯಿಂದ ಬೇಸತ್ತ 10 ಕ್ಕೂ ಹೆಚ್ಚು ಗಣವೇಷಧಾರಿಗಳಿಂದ ಯುವಕನಿಗೆ ಥಳಿಸಲಾಗಿದೆ. ನಂತರ ಪೊಲೀಸರಿಗೆ ಒಪ್ಪಿಸಲಾಯಿತು. ಆದ್ರೆ ಅಲ್ಲಿಯೂ ಸಹ ಮೈಲಾರಿ ಹೈಡ್ರಾಮಾ ಮಾಡಿದ್ದಾನೆ ಎಂದು ತಿಳಿದು ಬಂದಿದೆ.