ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಯುವಕನೊಬ್ಬ ಅಟ್ಟಹಾಸ ಮೆರೆದಿದ್ದು, ಸಿಕ್ಕ ಸಿಕ್ಕವರ ಮೇಲೆ ಬೇಸ್ ಬಾಲ್ ಬ್ಯಾಟ್ ನಿಂದ ಮನಬಂದಂತೆ ಹಲ್ಲೆ ಮಾಡಿದ್ದಾನೆ.
Advertisement
ಈ ಘಟನೆ ಬ್ರೂಕ್ ಪಿಲ್ಡ್ ನ ಕುಂದಲಹಳ್ಳಿ ಬಳಿಯ ಬ್ರಿಗೇಡ್ ಟೆಕ್ ಗಾರ್ಡನ್ ಬಳಿ ಜರುಗಿದೆ. ರೌಡಿಯಂತೆ ಅಟ್ಟಹಾಸ ಮಾಡ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಯುವಕ ನಿನ್ನೆ ರಾತ್ರಿ 8.20 ರ ಸುಮಾರಿಗೆ ಸಿಕ್ಕ ಸಿಕ್ಕವರ ಮೇಲೆ ಬ್ಯಾಟ್ ಬೀಸಿ ಹಲ್ಲೆ ನಡೆದಿದೆ. ವ್ಯಕ್ತಿಯೋರ್ವರು ಎಕ್ಸ್ ನಲ್ಲಿ ಈ ವಿಡಿಯೋ ಶೇರ್ ಮಾಡಿ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ.
ಇನ್ನೂ ಘಟನೆ ಸಂಪೂರ್ಣ ವಿವರ ನೀಡುವಂತೆ ವ್ಯಕ್ತಿ ಬಳಿ ಪೊಲೀಸರು ಮಾಹಿತಿ ಕೊಟ್ಟಿದ್ದಾರೆ.