ತುಮಕೂರು: ಡೆಂಟಲ್ ಚೆಕಪ್ ಗೆ ಬಂದಿದ್ದ ಯುವತಿ ಮೇಲೆ ಅತ್ಯಾಚಾರವೆಸಗಿರುವ ಘಟನೆ ತುಮಕೂರು ನಗರದ ಶೆಟ್ಟಿಹಳ್ಳಿಗೇಟ್ ನಲ್ಲಿ ನಡೆದಿದೆ.
Advertisement
ಅತ್ಯಾಚಾರ ಎಸಗಿದ ಆರೋಪ ಹೊತ್ತಿರುವ ಡಾ.ಸಂಜಯ್ ನಾಯಕ್ ತುಮಕೂರಿನಲ್ಲಿ ವಿನಾಯಕ ಡೆಂಟಲ್ ಕ್ಲಿನಿಕ್ ಹೆಸರಿನಲ್ಲಿ ವೈದ್ಯಕೀಯ ಸೇವೆ ಮಾಡುತ್ತಿದ್ದನು.
ರಾಜ್ಯ ಯುವ ಪ್ರಶಸ್ತಿ ವಿಜೇತ ಡಾ.ಸಂಜಯ್ ನಾಯಕ್ ಸಮಾಜ ಸೇವಕರಾಗಿದ್ದು, ವಿವಿಧ ಸಂಘ-ಸಂಸ್ಥೆಗಳಲ್ಲಿ ಪ್ರಮುಖ ಸ್ಥಾನದಲ್ಲಿದ್ದಾರೆ. ಯುವತಿ ನೀಡಿದ ದೂರಿನ ಆಧಾರ ಮೇಲೆ ಕೇಸು ದಾಖಲಾಗಿದೆ, ಪೊಲೀಸರು ಬಂಧನಕ್ಕೆ ಒಳಪಡಿಸಿದ್ದಾರೆ.