ಕೋಲಾರ:- ಕೋಲಾರ ನಗರದ ಶ್ರೇಯ ಆಸ್ಪತ್ರೆಯಲ್ಲಿ ಲ್ಯಾಪ್ರೋಸ್ಕೋಪಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಯುವತಿ ದುರ್ಮರಣ ಹೊಂದಿದ ಘಟನೆ ಜರುಗಿದೆ.
22 ವರ್ಷದ ದೀಪ್ತಿ ಮೃತಪಟ್ಟ ಯುವತಿ ಎನ್ನಲಾಗಿದೆ. ಕಿಡ್ನಿ ಸ್ಟೋನ್ ಕಾರಣ ಬುಧವಾರ ಲ್ಯಾಪ್ರೋಸ್ಕೋಪಿ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅದರಂತೆ ಇಂದು ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು.
ಆದರೆ, ಶಸ್ತ್ರಚಿಕಿತ್ಸೆ ಆದ ಕೆಲ ಸಮಯದ ಬಳಿಕ ಯುವತಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆಂದು ವೈದ್ಯರು ಪೋಷಕರಿಗೆ ತಿಳಿಸಿದ್ದಾರೆ.
ಇತ್ತ ಮೃತಳ ಪೋಷಕರು ಮಾತ್ರ, ಅನಸ್ತೇಶಿಯಾ ಡೋಸ್ ಹೆಚ್ಚಾಗಿ ಯುವತಿ ಮೃತಪಟ್ಟಿದ್ದಾಳೆಂದು ಆರೋಪಿಸಿ ಆಸ್ಪತ್ರೆಯ ವೈದ್ಯರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಆದರೆ, ಶಸ್ತ್ರಚಿಕಿತ್ಸೆ ಆದ ಕೆಲ ಸಮಯದ ಬಳಿಕ ಯುವತಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆಂದು ವೈದ್ಯರು ಪೋಷಕರಿಗೆ ತಿಳಿಸಿದ್ದಾರೆ. ಇತ್ತ ಮೃತಳ ಪೋಷಕರು ಮಾತ್ರ, ಅನಸ್ತೇಶಿಯಾ ಡೋಸ್ ಹೆಚ್ಚಾಗಿ ಯುವತಿ ಮೃತಪಟ್ಟಿದ್ದಾಳೆಂದು ಆರೋಪಿಸಿ ಆಸ್ಪತ್ರೆಯ ವೈದ್ಯರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.