ಚಿಕ್ಕಮಗಳೂರು:- ನಾಳೆ ಹಸೆಮಣೆ ಏರಬೇಕಾಗಿದ್ದ ಯುವತಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಸೊಲ್ಲಾಪುರ ಗ್ರಾಮದಲ್ಲಿ ಜರುಗಿದೆ.
ಶ್ರುತಿ ಸಾವನ್ನಪ್ಪಿದ ಯುವತಿ. ಘಟನೆಯಿಂದ ಮದುವೆ ಸಂಭ್ರಮದಲ್ಲಿದ್ದ ಕುಟುಂಬಸ್ಥರಿಗೆ ಬರಸಿಡಿಲು ಬಡಿದಂತಾಗಿದೆ. ಇದರಿಂದ ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕ ಆವರಿಸಿದೆ. ಇನ್ನು ಶೃತಿ ಅವರ ಸಾವು ಸುತ್ತಮುತ್ತಲಿನ ಗ್ರಾಮದ ಜನರನ್ನು ಆಘಾತಕ್ಕೀಡು ಮಾಡಿದ್ದು, ಎಲ್ಲರು ಮಮ್ಮಲ ಮರುಗಿದ್ದಾರೆ.
ನೂರಾರು ಕನಸುಗಳನ್ನು ಹೊತ್ತು ಯುವತಿಯೋರ್ವಳು ಮದುವೆ ಅಣಿಯಾಗಿದ್ದಳು. ಇನ್ನೇನು ನಾಳೆಯೇ ಯುವತಿ ಹಸೆಮಣೆ ಏರಬೇಕಿತ್ತು. ಹೀಗಾಗಿ ಎರಡೂ ಮನೆಯವರು ಮದುವೆಗೆ ಎಲ್ಲಾ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಆದ್ರೆ, ಮದುವೆ ಒಂದು ದಿನ ಮೊದಲೇ ಯುವತಿ ದುರಂತ ಸಾವು ಕಂಡಿರೋದು ಕರಳು ಹಿಂಡುವಂತೆ ಮಾಡಿದೆ.



