ಬೆಂಗಳೂರು: ಪಕ್ಷವು ಎಂದಿಗೂ ಈ ರೀತಿಯ ಗೂಂಡಾ ವರ್ತನೆಗಳಿಗೆ ಬಗ್ಗುವುದಿಲ್ಲ ಹಾಗೂ ಜಗ್ಗುವುದಿಲ್ಲ ಎಂದು ಪಕ್ಷದ ಬೆಂಗಳೂರು ನಗರ ಅಧ್ಯಕ್ಷ ಡಾ. ಸತೀಶ್ ಕುಮಾರ್ ಹೇಳಿದ್ದಾರೆ. ನಗರದ ಮಾಗಡಿ ರಸ್ತೆಯ ಹೇರೋಹಳ್ಳಿ ಕೆರೆಗೆ ಕಲುಷಿತ ನೀರು ಬಿಟ್ಟು ಸುತ್ತಮುತ್ತಲಿನ ಒಂದು
ಕಿಲೋಮೀಟರ್ ವ್ಯಾಪ್ತಿಯಲ್ಲಿ ಅನೈರ್ಮಲ್ಯ ವಾತಾವರಣ ಉಂಟಾಗಿರುವ ಸಮಸ್ಯೆಯನ್ನು ಆಮ್ ಆದ್ಮಿ ಪಕ್ಷವು ನಿನ್ನೆ ಮಾಧ್ಯಮಗಳೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡುತ್ತಿರುವ ಸಂದರ್ಭದಲ್ಲಿ ಯಶವಂತಪುರ ಶಾಸಕ ಎಸ್. ಟಿ. ಸೋಮಶೇಖರ್ ರವರ ಬೆಂಬಲಿಗರು ಏಕಾಏಕಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲಿಗೆ ಯತ್ನಿಸಿದ ದುರ್ಘಟನೆಯನ್ನು ಖಂಡಿಸಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,
ಪಕ್ಷವು ಎಂದಿಗೂ ಈ ರೀತಿಯ ಗೂಂಡಾ ವರ್ತನೆಗಳಿಗೆ ಬಗ್ಗುವುದಿಲ್ಲ ಹಾಗೂ ಜಗ್ಗುವುದಿಲ್ಲ. ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಸ್ಥಳೀಯ ಶಾಸಕರುಗಳ ಬಗ್ಗೆ ರಾಜ್ಯ ಕಾಂಗ್ರೆಸ್ ಮಹಿಳಾ ಅಧ್ಯಕ್ಷ ಸೌಮ್ಯ ರೆಡ್ಡಿ ಗಮನಹರಿಸಿದರೆ ಒಳ್ಳೆಯದು. ಪಕ್ಷದ ಕಾರ್ಯಕರ್ತರು ಜನತೆಯ ಮೂಲ ಸೌಕರ್ಯಗಳು ಹಾಗೂ ಸಮಸ್ಯೆಗಳ ಬಗ್ಗೆ ಹೋರಾಟವನ್ನು ಮುಂದುವರಿಸಿಕೊಂಡು ಬರುತ್ತದೆ ಎಂದು ತಿಳಿಸಿದರು.