ಉಪೇಂದ್ರ ಸಿನಿಮಾಗೆ ಸಾಥ್ ನೀಡಿದ ಅಮೀರ್ ಖಾನ್: UI ಚಿತ್ರದ ಟ್ರೇಲರ್ ಕೊಂಡಾಡಿದ ಮಿಸ್ಟರ್ ಪರ್ಫೆಕ್ಷನಿಸ್ಟ್

0
Spread the love

ರಿಯಲ್ ಸ್ಟಾರ್ ಉಪೇಂದ್ರ ನಟಿಸಿ ನಿರ್ದೇಶಿಸುತ್ತಿರುವ UI ಸಿನಿಮಾ ರಿಲೀಸ್ ಗೆ ಇನ್ನೂ ಎಂಟು ದಿನ ಮಾತ್ರವೇ ಭಾಕಿ ಇದೆ. ಈಗಾಗಲೇ ಸಿನಿಮಾದ ಟ್ರೈಲರ್ ಹಾಗೂ ಹಾಡುಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಮಧ್ಯೆ ರಿಲೀಸ್ ಗೆ ರೆಡಿಯಾಗಿರುವ ಯುಐ ಸಿನಿಮಾಗೆ ಬಾಲಿವುಡ್ ನಟ ಅಮೀರ್ ಖಾನ್ ಬೆಂಬಲವು ಸಿಕ್ಕಿದೆ.

Advertisement

ಬಾಲಿವುಡ್​ ನಟ ಅಮೀರ್ ಖಾನ್ ಕನ್ನಡದ ನಟ ಉಪೇಂದ್ರ​ ಸಿನಿಮಾಗೆ ಆಲ್​ ದಿ ಬೆಸ್ಟ್​ ಹೇಳಿದ್ದಾರೆ. ಇದೇ ಡಿಸೆಂಬರ್​ 20 ರಂದು ನನ್ನ ಬೆಸ್ಟ್ ಫ್ರೆಂಡ್ ಉಪೇಂದ್ರ ಸಿನಿಮಾ ತೆರೆಗೆ ಬರ್ತಿದೆ ಎಲ್ಲರೂ ಮಿಸ್ ಮಾಡದೇ ನೋಡಿ ಎಂದು ಮನವಿ ಮಾಡಿದ್ದಾರೆ.

‘ನಾನು ಈಗ ಉಪೇಂದ್ರ ಜೊತೆ ಇದ್ದೇನೆ. ಅವರ ಸಿನಿಮಾ ಡಿಸೆಂಬರ್​ 20ರಂದು ಬಿಡುಗಡೆ ಆಗುತ್ತಿದೆ. ನಾನು ಅವರ ದೊಡ್ಡ ಅಭಿಮಾನಿ. ಟ್ರೇಲರ್​ ಅದ್ಭುತವಾಗಿದೆ. ಅದನ್ನು ಕಂಡು ನಾನು ಆಶ್ವರ್ಯಚಕಿತನಾದೆ. ನನ್ನ ಸ್ನೇಹಿತ ಉಪೇಂದ್ರ ಅವರು ಎಂಥ ಅದ್ಭುತವಾದ ಟ್ರೇಲರ್​ ಮಾಡಿದ್ದಾರೆ’ ಎಂದು ಆಮಿರ್​ ಖಾನ್​ ಅವರು ಮನಸಾರೆ ಹೊಗಳಿ ಉಪೇಂದ್ರ ಅವರ ಬೆನ್ನು ತಟ್ಟಿದ್ದಾರೆ.

‘ಈ ಸಿನಿಮಾ ದೊಡ್ಡ ಹಿಟ್ ಆಗಲಿದೆ. ಹಿಂದಿ ಪ್ರೇಕ್ಷಕರು ಕೂಡ ತುಂಬ ಇಷ್ಟಪಡಲಿದ್ದಾರೆ. ನಾನಂತೂ ಟ್ರೇಲರ್​ ನೋಡಿ ಶಾಕ್ ಆದೆ. ನಿಮಗೆ ನಾನು ಶುಭ ಹಾರೈಸುತ್ತೇನೆ. ಈ ಸಿನಿಮಾ ದೊಡ್ಡ ಯಶಸ್ಸು ಕಾಣಲಿ’ ಎಂದು ಆಮಿರ್​ ಖಾನ್ ಶುಭ ಹಾರೈಸಿಸದ್ದಾರೆ.

UI ಸಿನಿಮಾ ಕನ್ನಡದ ಮತ್ತೊಂದು ಬಹು ನಿರೀಕ್ಷಿತ ಚಿತ್ರವಾಗಿದ್ದು ಡಿಸೆಂಬರ್-20 ರಂದು ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ UI ಸಿನಿಮಾ ತೆರೆ ಕಾಣಲಿದೆ.  ಇಂದ್ರಜಿತ್ ಲಂಕೇಶ್, ಓಂ ಪ್ರಕಾಶ್ ರಾವ್, ನಿಧಿ ಸುಬ್ಬಯ್ಯ, ಮುರಳಿ ಶರ್ಮಾ ಹೀಗೆ ಇನ್ನು ಹಲವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. 100 ಕೋಟಿ ಬಜೆಟ್‌ನಲ್ಲಿಯೇ ಇಡೀ ಸಿನಿಮಾ ರೆಡಿ ಆಗಿದೆ ಎನ್ನುವ ಮಾತುಗಳು ಕೇಳಿ ಬರ್ತಿದೆ.


Spread the love

LEAVE A REPLY

Please enter your comment!
Please enter your name here