ವಿಜಯಸಾಕ್ಷಿ ಸುದ್ದಿ, ಗದಗ : ಕೋಲಾರದಲ್ಲಿ ಜರುಗಿದ ರಾಜ್ಯಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಗದಗ ಗ್ರಾಮೀಣ ವಲಯದ ಸರ್ಕಾರಿ ಪ್ರೌಢಶಾಲೆ ಶಿರುಂಜದ ವಿದ್ಯಾರ್ಥಿ ಆಶೀಫ ಶೇಖಸಾಬ ನದಾಫ್ ತ್ರಿವಿಧ ಜಿಗಿತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
ಗದಗ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ ವಿದ್ಯಾರ್ಥಿಗೆ ಶಾಲಾ ಗುರುವೃಂದ ಹಾಗೂ ಎಸ್.ಡಿ.ಎಂ.ಸಿ. ಪರವಾಗಿ ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು. ಈ ಸಂದರ್ಭದಲ್ಲಿ ಕನ್ನಡ ಭಾಷಾ ಶಿಕ್ಷಕರಾದ ಬಿ.ಎಫ್. ಪೂಜಾರ ಮಾತನಾಡಿ, ಗದಗ ಜಿಲ್ಲೆಯ ಇತಿಹಾಸದಲ್ಲಿ ಅಥ್ಲೆಟಿಕ್ಸ್ ವಿಭಾಗದಿಂದ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಪ್ರಥಮ ವಿದ್ಯಾರ್ಥಿ ಎಂದು ಶ್ಲಾಘಿಸಿ, ಈ ವಿದ್ಯಾರ್ಥಿಗೆ ಅತ್ಯುತ್ತಮ ತರಬೇತಿ ನೀಡಿದ ಗ್ರಾಮದ ಉತ್ಸಾಹಿ ಯುವಕ ದಿವಾನಸಾಬ ನದಾಫ್ ಕೂಡ ಅಭಿನಂದನಾರ್ಹರು ಎಂದರು.
ಇದೇ ಸಂದರ್ಭದಲ್ಲಿ ಶಾಲೆಗೆ ಆಗಮಿಸಿದ ಶರಣಪ್ಪ ನಾಗರಳ್ಳಿ ಶಿಕ್ಷಕರು ಹಾಗೂ ಗುರುಮಾತೆ ಪಿ.ಐ. ಅವರೆಡ್ಡಿ ಸಾಧಕ ವಿದ್ಯಾರ್ಥಿಗೆ ನಗದು ಬಹುಮಾನ ನೀಡಿ ಪುರಸ್ಕರಿಸಿದರು.
ಎಸ್.ಡಿ.ಎಂ.ಸಿ. ಅಧ್ಯಕ್ಷ ಜಿ.ಆಯ್. ಕಪ್ಪತ್ತನವರ, ಶಾಲಾ ಪ್ರಧಾನ ಗುರುಮಾತೆ ಪಿ.ಎಸ್. ವಸ್ತçದ, ಸದಸ್ಯರಾದ ಪರಶುರಾಮ ಉಪ್ಪಾರ, ಶರೀಫ ನದಾಫ್, ಉಮೇಶ ಬೀಡನಾಳ, ಸಿದ್ದು ಕಪ್ಪತ್ತನವರ, ಬಾಲಕೃಷ್ಣ ಲೆಂಕಣ್ಣವರ, ಬಸವರಾಜ ಬನಹಟ್ಟಿ, ಶರಣಪ್ಪ ಗುಡ್ಡದ, ಶರಣಪ್ಪ ಡಂಬ್ರಳ್ಳಿ, ಮುತ್ತು ನದಾಫ್, ಮಂಜುನಾಥ ಹುಡೇದ, ಅಜಯ ಗುಡ್ಡದ ಹಾಗೂ ಶಾಲಾ ಶಿಕ್ಷಕರಾದ ರವಿರಾಜ ಪವಾರ, ಡಿ.ಟಿ. ಜಮಾದಾರ, ಶ್ರೀಶೈಲ ದೇಸಾಯಿ, ಮಲ್ಲಾರೆಪ್ಪ ಬೆಂತೂರ, ಮಹಾಂತೇಶ ಪೂಜಾರ, ಶರಣು ಹತ್ತಿ, ಎಮ್.ಎ. ಹಿರೇಮಠ, ಸೀಮಾ ಅಂಕೋಲೆಕರ ಹಾಗೂ ಗ್ರಾಮದ ಹಿರಿಯರು, ಯುವಕರು ಉಪಸ್ಥಿತರಿದ್ದು ಶುಭ ಕೋರಿದರು.