ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ಪಟ್ಟಣ ಡಾ. ಎಪಿಜೆ ಅಬ್ದುಲ್ ಕಲಾಂ ಕ್ರಿಕೆಟ್ ಪ್ರೀಮಿಯರ್ ಲೀಗ್ನ ಫೈನಲ್ ಪಂದ್ಯದಲ್ಲಿ ಟಿಪ್ಪು ವಾರಿಯರ್ಸ್ ಹಾಗೂ ಡಾಲಾಯತ್ ಬ್ರದರ್ಸ್ ನಡುವಿನ ಪಂದ್ಯದಲ್ಲಿ ಡಾಲಾಯತ್ ಬ್ರದರ್ಸ್ ತಂಡವು 1 ರನ್ನಿಂದ ರೋಚಕ ಗೆಲುವು ಸಾಧಿಸಿತು.
ಕುಷ್ಟಗಿ ರಸ್ತೆಯ ಮುತ್ತಣ್ಣ ಮೆಣಸಿನಕಾಯಿ ಅವರ ಬಯಲು ಜಾಗೆಯಲ್ಲಿ ಕಳೆದ 21 ದಿನಗಳಿಂದ ನಡೆಯುತ್ತಿದ್ದ ಪಂದ್ಯಾವಳಿಯ ಫೈನಲ್ ಮ್ಯಾಚ್ನಲ್ಲಿ 1ನೇ ಓವರ್ನಲ್ಲಿಯೇ ನಜೀರ್ ಸರ್ಕಾವಸ್ ಮೊದಲ ವಿಕೆಟ್, ಅನ್ವರ ಕವಲೂರ್ ವಿಕೆಟ್ ಪತನವಾದಾಗ 8 ರನ್ ಆಗಿದ್ದವು. ಹೀಗಾಗಿ ಕೊಂಚ ನಿಧಾನ ಗತಿಗೆ ಆಟಕ್ಕೆ ತಂಡವು ಆದ್ಯತೆ ನೀಡಿತು. 16 ರನ್ಗಳಾದಾಗ ಸಲೀಂ ಕಡ್ಲಿಮಟ್ಟಿ ಮತ್ತು 33 ರನ್ಗೆ ಗಫಾರ್ ಡಾಲಾಯತ್ ವಿಕೆಟ್ ಉರುಳಿದವು.
6 ಓವರ್ನ 4ನೇ ಬಾಲಿಗೆ 40 ರನ್ ಸೇರಿಸಿದ್ದಾಗ 5ನೇ ವಿಕೆಟ್ ಎಂ.ಡಿ. ರಫಿ ಹಾಗೂ 44 ರಜಾಕ್ ಪೊಲೀಸ್ ಮತ್ತು 45 ರನ್ ಆದಾಗ ರಜಾಕ್ ಡಾಲಾಯತ್ ವಿಕೆಟ್ ಕಳೆದುಕೊಂಡ ತಂಡ ಸಂಕಷ್ಟಕ್ಕೆ ಸಿಲುಕಿತ್ತು. 7 ಓವರ್ ಮುಕ್ತಾಯಕ್ಕೆ 65 ರನ್ ಆದಾಗ ಮುನ್ನಾ ಮುಜಾವಾರ ಔಟ್ ಆದರು. ಮೌಲಾ ಬಳ್ಳಾರಿ 11 ಬಾಲ್ಗೆ 27 ರನ್ ನೆರವಿನಿಂದ ಡಾಲಾಯತ್ ಬ್ರದರ್ಸ್ ತಂಡವು 10 ಓವರ್ನಲ್ಲಿ 79 ರನ್ ಕಲೆಹಾಕಿತು.
ಫಾರಾಕ್ ತಟಗಾರ 2 ಓವರ್ 20 ರನ್ 2 ವಿಕೆಟ್, ಮೈನು 2 ಓವರ್ 13 ರನ್, ಮೈಬು ಹವಾಲ್ದಾರ್ 2 ಓವರ್ 17 ರನ್ 1 ವಿಕೆಟ್, ಸಲೀಂ ಹವಲ್ದಾರ್ 2 ಒವರ್ 14 ರನ್ 1 ವಿಕೆಟ್ ಹಾಗೂ ಯಾಸೀನ್ 2 ಓವರ್ 12 ರನ್ 2 ವಿಕೆಟ್ ಪಡೆದಿದ್ದರಿಂದ ಡಾಲಾಯತ್ ಬ್ರದರ್ಸ್ ತಂಡವನ್ನು 79 ರನ್ಗೆ ಕಟ್ಟಿ ಹಾಕಿದರು.
ಡಾಲಾಯತ್ ಬ್ರರ್ಸ್ ತಂಡ ನೀಡಿದ್ದ 80 ರನ್ನ ಗುರಿ ಬೆನ್ನಟ್ಟಿದ ಟಿಪ್ಪು ವಾರಿಯರ್ಸ್ ತಂಡವು ಮೊದಲ ಓವರ್ನಲ್ಲೇ ಮೈನು ಡಕೌಟ್ ಹಾಗೂ 2ನೇ ಓವರ್ ಮೊದಲ ಎಸೆತದಲ್ಲಿ 5 ರನ್ ಹೊಡೆದಿದ್ದ ಯಾಸೀನ್ ವಿಕೆಟ್ ಕಳೆದುಕೊಂಡು ತಂಡವು ಒತ್ತಡಕ್ಕೆ ಒಳಗಾಯಿತು. ತಂಡದ ಮೊತ್ತ 30 ರನ್ ಆದಾಗ ಸಲೀಂ ಹವಾಲ್ದಾರ್ 14 ರನ್ ಹೊಡದು ಔಟ್ ಆದರು. ತಂಡದ ಮೊತ್ತ 38 ಆದಾಗ ಸಲೀಂ ನಿಡನಸ್ನೂರ ಹಾಗೂ 46 ಆದಾಗ ಫಾರೂಕ್ ತಟಗಾರ ತಂಡವು ವಿಕೆಟ್ ಕಳೆದುಕೊಂಡಿತು. 8 ಓವರ್ 5 ಬಾಲ್ ಆದಾಗ ತಂಡದ ಮೊತ್ತವು 71 ಆಗಿತ್ತು.
27 ರನ್ ಹೊಡೆದಿದ್ದ ಟಿಪ್ಪು ಸುಲ್ತಾನ್ ತಂಡದ ನಾಯಕ ಬಬ್ಲು ಗೆಲುವು ಸಾಧಿಸುತ್ತಾರೆ ಎನ್ನುವ ನಿರೀಕ್ಷೆಯಲ್ಲಿದ್ದಾಗ ಔಟ್ ಆದರು. ಹೀಗಾಗಿ ಸಂಕಷ್ಟಕ್ಕೆ ಸಿಲುಕಿದ್ದ ತಂಡದ ಆಟಗಾರರಾದ ಅದೇ ಓವರ್ನಲ್ಲಿ ಮೈಬೂ ಆರಗಿದ್ದಿ ಸಹ ಔಟ್ ಆದರು. 9 ಓವರ್ 2ನೇ ಬಾಲಿನಲ್ಲಿ 74 ರನ್ ಆದಾಗ ಶಾರುಕ್ ಹವಾಲ್ದಾರ್ ಸಹ ಔಟ್ ಆದರು. ಹೀಗಾಗಿ 6 ರನ್ ಹೊಡೆಯಲು 4 ಬಾಲ್ ಉಳಿದಿದ್ದವು. ಮೈಬು ಹವಾಲ್ದಾರ್ ಹಾಗೂ ದಾವಲ್ ತಾಳಿಕೋಟಿ ಕೇವಲ 4 ರನ್ ಹೊಡೆದ ಪರಿಣಾಮ ತಂಡ 2 ರನ್ ಸೋಲನುಭವಿಸಿತು.
ನಜೀರ್ ಸರ್ಕಾವಸ್ 2 ಓವರ್ 10 ರನ್ 1 ವಿಕೇಟ್, ಸಲೀಂ ಕಡ್ಲಿಮಟ್ಟಿ 2 ಒವರ್ 16 ರನ್ 2 ವಿಕೇಟ್, ರಜಾಕ್ ಪೊಲೀಸ್ 2 ಓವರ್ 19 ರನ್ 1 ವಿಕೇಟ್, ಶಾಹೀಲ್ ಮೋಮಿನ್ 2 ಓವರ್ 13 ರನ್ ನೀಡಿದರು. ಗಫಾರ್ ಡಾಲಾಯತ್ 2 ಓವರ್ 16 ರನ್ 3 ವಿಕೇಟ್ ಪಡೆದ ಗಪರ್ ಡಾಲಾಯಾತ್ ಮ್ಯಾನ್ ಆಪ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.