ಲಕ್ಷ್ಮೇಶ್ವರ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಲಕ್ಷ್ಮೇಶ್ವರ ಘಟಕದಿಂದ ಬುಧವಾರ ಪಟ್ಟಣದ ಮುನ್ಸಿಪಲ್ ಪದವಿ ಕಾಲೇಜಿನಲ್ಲಿ ಸ್ವಚ್ಛತಾ ಕಾರ್ಯದೊಂದಿಗೆ ಸಸಿ ನೆಡುವ ಮೂಲಕ ಎಬಿವಿಪಿ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಯಿತು. ಈ ವೇಳೆ ಎಬಿವಿಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಅಭಿಷೇಕ ಉಮಚಗಿ, ಜಿಲ್ಲಾ ಸಂಚಾಲಕ ಪ್ರಕಾಶ ಕುಂಬಾರ, ನಗರ ಸಹ ಕಾರ್ಯದರ್ಶಿ ಯಶವಂತ ಶಿರಹಟ್ಟಿ, ವಿನಯ್ ಕುಂಬಾರ, ಕಿರಣ್ ಗುಡಿಗೇರಿ, ವೀರೇಶ್ ಕುಂಬಾರ, ಹನುಮಂತ ಹುಳಿಕೊಪ್ಪೆ, ಮಾಂತೇಶ ಕುರಿ, ಎಬಿವಿಪಿ ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
Trending Now



