ಐಸ್ ಕ್ರೀಂನೊಂದಿಗೆ ಬರುವ ರುಚಿಗಳನ್ನು ಸ್ವೀಕರಿಸಿ, ಪರಿಸ್ಥಿತಿಗೆ ಅನುಗುಣವಾಗಿ ಮುಂದುವರಿಯಬೇಕು: ನಟ ವಿಜಯ್ ವರ್ಮ

0
Spread the love

ಖ್ಯಾತ ನಟಿ ತಮನ್ನಾ ಭಾಟಿಯಾ ಹಾಗೂ ವಿಜಯ್‌ ವರ್ಮಾ ಎರಡು ವರ್ಷಗಳ ಡೇಟಿಂಗ್‌ ಬಳಿಕ ಇದೀಗ ಬ್ರೇಕ್‌ ಅಪ್‌ ಮಾಡಿಕೊಂಡಿದ್ದಾರೆ. ತಮನ್ನಾ ಹಾಗೂ ವಿಜಯ್‌ ಇನ್ನೇನೂ ಮದುವೆಯಾಗುತ್ತಾರೆ ಎಂದೇ ಹೇಳಲಾಗಿತ್ತು. ಆದ್ರೆ ಏಕಾಏಕಿ ದೂರ ದೂರವಾಗಿದ್ದು ಇದೀಗ ತಮ್ಮ ರಿಲೇಷನ್‌ ಶಿಪ್‌ ಬಗ್ಗೆ ವಿಜಯ್‌ ವರ್ಮಾ ಪ್ರತಿಕ್ರಿಯಿಸಿದ್ದಾರೆ.

Advertisement

ವಿಜಯ್ ವರ್ಮಾ ತಮ್ಮ ಪ್ರೀತಿಯನ್ನು ಐಸ್ ಕ್ರೀಂಗೆ ಹೋಲಿಸಿದ್ದಾರೆ. ಐಸ್ ಕ್ರೀಂನೊಂದಿಗೆ ಬರುವ ರುಚಿಗಳನ್ನು ಸ್ವೀಕರಿಸಿ, ಪರಿಸ್ಥಿತಿಗೆ ಅನುಗುಣವಾಗಿ ಮುಂದುವರಿಯಬೇಕು ಎಂದು ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ವಿಜಯ್ ವರ್ಮಾ, ‘ನೀವು ಸಂಬಂಧಗಳ ಬಗ್ಗೆ ಮಾತನಾಡುತ್ತಿದ್ದೀರಿ, ಸರಿಯೇ? ನೀವು ಐಸ್ ಕ್ರೀಮ್ ತಿನ್ನುವಂತೆ ಸಂಬಂಧಗಳನ್ನು ಆನಂದಿಸಿದರೆ, ನೀವು ಸಂತೋಷವಾಗಿರುತ್ತೀರಿ ಎಂದು ನಾನು ಭಾವಿಸುತ್ತೇನೆ. ನೀವು ಪಡೆಯುವ ಐಸ್ ಕ್ರೀಂನ ತಿಂದು ಮುಂದುವರಿಯಬೇಕು’ ಎಂದು ಅವರು ಹೇಳಿದರು.

ತಮನ್ನಾ ಮತ್ತು ವಿಜಯ್ ವರ್ಮಾ 2022 ‘ಲಸ್ಟ್ ಸ್ಟೋರೀಸ್ 2’ನಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಆ ಬಳಿಕ ಇಬ್ಬರ ನಡುವೆ ಪ್ರೇಮ ಶುರುವಾಗಿದೆ. ಗೋವಾದಲ್ಲಿ ನಡೆದ ಹೊಸ ವರ್ಷದ ಪಾರ್ಟಿಯಲ್ಲಿ ತಮನ್ನಾ ಮತ್ತು ವಿಜಯ್ ಲಿಪ್ ಲಾಕ್ ಮಾಡುತ್ತಿರುವುದು ಕಂಡುಬಂದಿತ್ತು. ಅಂದಿನಿಂದ, ಇಬ್ಬರ ನಡುವಿನ ಪ್ರಣಯದ ಚರ್ಚೆಗಳು ಪ್ರಾರಂಭವಾದವು. ಇದೀಗ ಪ್ರೀತಿ ಶುರುವಾದ ಎರಡೇ ಎರಡು ವರ್ಷಕ್ಕೆ ಇಬ್ಬರು ದೂರ ದೂರವಾಗಿದ್ದಾರೆ.


Spread the love

LEAVE A REPLY

Please enter your comment!
Please enter your name here